Latest

ವಿಶ್ವವಿಖ್ಯಾತ ಗಾಯಕ ಜಸ್ಟಿನ್ ಬೀಬರ್ ಗೆ ಪಾರ್ಶ್ವವಾಯು

ಪ್ರಗತಿವಾಹಿನಿ ಸುದ್ದಿ; ವಾಷಿಂಗ್ಟನ್: ವಿಶ್ವವಿಖ್ಯಾತ ಗಾಯಕ ಜಸ್ಟಿನ್ ಬೀಬರ್ ಇದೀಗ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಅವರ ಮುಖಕ್ಕೆ ಪಾರ್ಶ್ವವಾಯು ಆಗಿದೆ.

ಪ್ರಪಂಚದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ 28 ವರ್ಷದ ಪಾಪ್ ಗಾಯಕ ಜಸ್ಟಿನ್ ಬೀಬರ್ ಮುಖದ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದು, ಈ ಬಗ್ಗೆ ಸ್ವತ: ಅವರೇ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿ ತಮಗೆ ಮುಖದ ಪಾರ್ಶ್ವವಾಯುವುಂಟಾಗಲು ಒಂದು ವೈರಸ್ ಕಾರಣ. ಕೈ ನಾಡಿಗೆ ವೈರಸ್ ಸೋಕಿದ ಪರಿಣಾಮ ಮುಖದ ಭಾಗದಲ್ಲಿ ಪಾರ್ಶ್ವವಾಯುವಿಗೆ ಒಳಗಾಗಿದೆ. ಮುಖದ ಬಲ ಭಾಗಕ್ಕೆ ಪಾರ್ಶ್ವವಾಯು ಅಟ್ಯಾಕ್ ಆಗಿದ್ದು, ಕಣ್ಣು ಆಡಿಸಲೂ ಸಾಧ್ಯವಾಗುತ್ತಿಲ್ಲ.ಎಡಭಾಗದ ಮುಖ ಸರಿಯಾಗಿಯೇ ಇದೆ. ಆದರೆ ಬಲಭಾಗ ಸಂಪೂರ್ಣ ಪಾರ್ಶ್ವವಾಯುಗೆ ತುತ್ತಾಗಿದೆ ಎಂದು ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಸಿಎಂ ಮತಯಾಚನೆ

Related Articles

Back to top button