Latest

ಈಶ್ವರಪ್ಪ-ಸಾ.ರಾ.ಮಹೇಶ್ ಭೇಟಿಯ ಅಸಲಿಯತ್ತೇನು?

 

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: 

Home add -Advt

6ನೇ ಬಾರಿಯ ಆಪರೇಶನ್ ಕಮಲ ಸರ್ಕಸ್ ಇನ್ನೇನು ಯಶಸ್ವಿಯಾಯಿತು ಎನ್ನುವ ಹೊತ್ತಿಗೆ ಬಿಜೆಪಿ ತಾನೇ ವಿವಾದವೊಂದನ್ನು ಮೈಮೇಲೆಳೆದುಕೊಂಡಿದೆ.

ಇದನ್ನೇ ಕಾಯುತ್ತಿದ್ದರೆನ್ನುವಂತೆ ಕೆಲವರು ಅದಕ್ಕೆ ಸರಿಯಾದ ಪ್ರಚಾರ ಕೊಡುವಲ್ಲೂ ಯಶಸ್ವಿಯಾಗಿದ್ದಾರೆ.

ಬಿಜೆಪಿ ಮುಖಂಡರಾದ ಮುರಳೀಧರ್ ರಾವ್ ಮತ್ತು ಕೆ.ಎಸ್. ಈಶ್ವರಪ್ಪ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರನ್ನು  ಭೇಟಿ ಮಾಡಿದ ವಿವಾದ ಪಕ್ಷದ ಆಂತರಿಕ ವಲಯದಲ್ಲೂ ಭಾರಿ ಬಿರುಗಾಳಿ ಎಬ್ಬಿಸಿದೆ.

ಸಚಿವ ಮಹೇಶ್,  ಪ್ರವಾಸೋದ್ಯಮ ಇಲಾಖೆಯ ಕೆ.ಕೆ.ಗೆಸ್ಟ್ ಹೌಸ್ ನಲ್ಲಿ ಈ ಇಬ್ಬರು ಬಿಜೆಪಿ ಮುಖಂಡರ ಜೊತೆ ಚರ್ಚಿಸಿದ್ದರು. ಈ ಭೇಟಿ ಭಾರೀ ಸುದ್ದಿಯಾಗಿದೆ. ಇದೊಂದು ಆಕಸ್ಮಿಕ ಭೇಟಿಯೆಂದು ಎರಡೂ ಪಕ್ಷಗಳು ಸ್ಪಷ್ಟನೆ  ನೀಡಿವೆ. ಆದರೆ, ಅವರು ಭೇಟಿಯಾಗುವ ಮುನ್ನವೇ ಮಾಧ್ಯಮಗಳಿಗೆ ಈ ಸುದ್ದಿ ಹೋಗಿದೆ.

Related Articles

Back to top button