Kannada NewsKarnataka NewsNational

*ಮಹಾರಾಣಿ ಕಾಲೇಜಿನ ಕಟ್ಟಡ ಕುಸಿತ ಪ್ರಕರಣ: ಕಾರ್ಮಿಕ ಸಾವು*

ಪ್ರಗತಿವಾಹಿನಿ ಸುದ್ದಿ : ಶಿಥಿಲಗೊಂಡ ಕಾರಣ ದುರಸ್ತಿ ಮಾಡುತ್ತಿದ್ದ ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಕಟ್ಟಡದ ಮೇಲ್ಬಾವಣಿ ಮಂಗಳವಾರ ಪೂರ್ಣ ಕುಸಿದಿದ್ದು, ಓರ್ವ ಕಾರ್ಮಿಕ ಅವಶೇಷಗಳಡಿ ಸಿಲುಕಿದ್ದ ಓರ್ವ ಯುವಕ ಮೃತಪಟ್ಟಿದ್ದಾನೆ.

ಮೈಸೂರಿನ ಗೌಸಿಯಾ ನಗರದ ನಿವಾಸಿ ಸದ್ದಾಂ ಮೃತ ಕಾರ್ಮಿಕ ಎಂದು ಗುರುತಿಸಲಾಗಿದೆ. ಮಹಾರಾಣಿ ಕಾಲೇಜಿನ ಕಟ್ಟಡ ಸುಮಾರು 80 ವರ್ಷದ ಹಳೆಯದ್ದಾಗಿದ್ದು, ಕಳೆದ ಮೂರು ದಿನಗಳಿಂದ ಕಟ್ಟಡವನ್ನು ಸಂಪೂರ್ಣವಾಗಿ ನೆಲಸಮ ಮಾಡಿ ಮರು ನಿರ್ಮಾಣ ಕಾರ್ಯ ಆರಂಭಗೊಂಡಿತ್ತು.

Home add -Advt

ಹಲವು ವರ್ಷಗಳ ನಿರಂತರ ಒತ್ತಾಯದ ಬಳಿಕ ಸರ್ಕಾರ ಕಾಮಗಾರಿಗೆ ಅನುಮೋದನೆ ನೀಡಿತ್ತು. ಗುತ್ತಿಗೆದಾರ ಚಂದ್ರ ಎಂಬವರು ಕಾಮಗಾರಿ ಆರಂಭಿಸಿದ್ದರು. ಮಂಗಳವಾರ 14 ಕಾರ್ಮಿಕರು ಕರ್ತವ್ಯದಲ್ಲಿ ನಿರತರಾಗಿದ್ದರು. ದಿನದ ಕೆಲಸ ಮುಗಿಸಿ ಮನೆಗೆ ತೆರಳಲು ಸಿದ್ಧರಾಗುತ್ತಿದ್ದರು.

ಆದರೆ ಈ ವೇಳೆ ಮೃತ ಸದ್ದಾಂ ಬಟ್ಟೆ ಎತ್ತಿಕೊಂಡು ಬರಲು ಕಟ್ಟಡದ ಒಳಗಡೆ ಹೋದ ವೇಳೆ ಮೇಲ್ಟಾವಣಿ ಏಕಾಏಕಿ ಕುಸಿದು ಬಿದ್ದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿ ಕಾರ್ಯಾಚರಣೆ ಆರಂಭಿಸಿದರು. ಇದೀಗ ಇಂದು ಮುಂಜಾನೆ ಮೃತ ದೇಹ ಪತ್ತೆಯಾಗಿದೆ.

Related Articles

Back to top button