Latest

ಲಾರಿಗೆ ಕ್ರೂಸರ್ ಡಿಕ್ಕಿ; ಮಕ್ಕಳು ಸೇರಿ ಐವರು ಸ್ಥಳದಲ್ಲೇ ದುರ್ಮರಣ

ಪ್ರಗತಿವಾಹಿನಿ ಸುದ್ದಿ; ಯಾದಗಿರಿ: ನಿಂತಿದ್ದ ಲಾರಿಗೆ ಕ್ರೂಸರ್ ಡಿಕ್ಕಿಯಾಗಿ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ಬಳಿಚಕ್ರ ಗ್ರಾಮದಲ್ಲಿ ನಡೆದಿದೆ.

ರಾಷ್ಟ್ರೀಯ ಹೆದ್ದರೈ 150ರಲ್ಲಿ ಈ ದುರಂತ ಸಂಭವಿಸಿದೆ. ಮುನೀರ್ (40), ನಯಾಮತ್ (40), ಮುದ್ದತ್ ಶಿರ್ (12), ರಮೀಜಾ ಬೇಗಂ (50), ಸುಮ್ಮಿ (12) ಮೃತರು. ಮೃತರು ಆಂಧ್ರಪ್ರದೇಶ ಮೂಲದವರು ಎನ್ನಲಾಗಿದೆ.

ಕ್ರೂಸರ್ ವಾಹನ ಆಂಧ್ರಪ್ರದೇಶದ ನಂದ್ಯಾಲ್ ಜಿಲ್ಲೆಯಿಂದ ಕಲಬುರ್ಗಿಯ ಖಾಜಾ ಬಂದೇನವಾಜ ದರ್ಗಾದ ಉರುಸ್ ಜಾತ್ರೆಗೆ ಬರುತ್ತಿತ್ತು. ಈ ವೇಳೆ ರಸ್ತೆ ಪಕ್ಕದಲ್ಲಿ ನಿಂತಿದ್ದ ಲಾರಿಗೆ ಕ್ರೂಸರ್ ಡಿಕ್ಕಿ ಹೊಡೆದಿದೆ. ಓರ್ವ ಬಾಲಕಿ, ಬಾಲಕ ಸೇರಿದಂತೆ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

https://pragati.taskdun.com/bjp8-workersfir-filemla-kariyamma-nayak/

Related Articles

Back to top button