ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿಯನ್ನು ಎಸ್ ಐಟಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದು, ಈ ವೇಳೆ ಪೋಷಕರ ಭೇಟಿಗೆ ಅನುಮತಿ ನೀಡುವಂತೆ ಯುವತಿ ಅಧಿಕಾರಿಗಳ ಮುಂದೆ ಕಣ್ಣೀರಿಟ್ಟಿದ್ದಾಳೆ ಎಂದು ತಿಳಿದುಬಂದಿದೆ.
ಯುವತಿಯ ವೈದ್ಯಕೀಯ ತಪಾಸಣೆ ಬಳಿಕ ಎಸ್ ಐಟಿ ಅಧಿಕಾರಿಗಳ ಬಳಿ, ನಾನು ನನ್ನ ಪೋಷಕರ ಜೊತೆ ಮಾತನಾಡಬೇಕು. ಅನುಮತಿ ನಿಡುವಂತೆ ಯುವತಿ ಕಣ್ಣೀರಿಟ್ಟಿದ್ದಾಳೆ. ಈ ವೇಳೆ ಅಧಿಕಾರಿಗಳು ಯುವತಿಗೆ ಸಮಾಧಾನ ಮಾಡಿ ವಿಚಾರಣೆಗೆ ಕರೆತಂದಿದ್ದಾರೆ ಎಂದು ಹೇಳಲಾಗಿದೆ.
ಸಧ್ಯದ ಮಾಹಿತಿ ಪ್ರಕಾರ ಎಸ್ ಐಟಿ ಅಧಿಕಾರಿಗಳು ಯುವತಿ ವಾಸವಿದ್ದ ಆರ್.ಟಿ.ನಗರದ ಪಿಜಿಯಲ್ಲಿ ಮಹಜರು ನಡೆಸಿದ್ದು, ರಮೇಶ್ ಜಾರಕಿಹೊಳಿ ಭೇಟಿಯಾದ ಸಂದರ್ಭದಲ್ಲಿ ಯುವತಿ ಧರಿಸಿದ್ದ ಬಟ್ಟೆಗಳನ್ನು ವಶಕ್ಕೆ ಪಡೆದು ಎಸ್ ಎಫ್ ಎಲ್ ಗೆ ರವಾನೆ ಮಾಡಿದ್ದಾರೆ ಎನ್ನಲಾಗಿದೆ.
ಸಿಡಿ ಪ್ರಕರಣ: ಡಿಕೆಶಿ ವಿರುದ್ಧ ಹೊಸ ಬಾಂಬ್ ಸಿಡಿಸಿದ ಯುವತಿ ಸಹೋದರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ