ಪ್ರಗತಿವಾಹಿನಿ ಸುದ್ದಿ; ಕೀವ್: ರಷ್ಯಾ ಸೇನೆ ಉಕ್ರೇನ್ ದೇಶದೊಳಗೆ ನುಗ್ಗಿದ್ದು ಉಕ್ರೇನ್‌ನ ಬಹುತೇಕ ನಗರಗಳನ್ನು ವಶಪಡಿಸಿಕೊಳ್ಳುತ್ತಿದೆ. ಇತ್ತ ಉಕ್ರೇನ್ ಕೂಡ ಪ್ರಬಲ ಹೋರಾಟ ನಡೆಸುತ್ತಿದೆ. ಎರಡೂ ಕಡೆ ಸಾವಿರಾರು ಸಾವು ನೋವುಗಳು ಸಂಭವಿಸಿವೆ. ನೂರಾರು ಕಟ್ಟಗಳು ಧ್ವಂಸವಾಗಿವೆ. ಮಿಲಿಟರಿ ವಾಹನಗಳು, ಹೆಲಿಕಾಪ್ಟರ್‌ಗಳು, ನಾಶವಾಗಿದ್ದು ರಣರಂಗದ ಚಿತ್ರಣ ಭೀಕರವಾಗಿದೆ.
ಈ ನಡುವೆ ಪ್ರಸಕ್ತ ಯುದ್ಧದಲ್ಲಿ x ಮತ್ತು z ಚಿಹ್ನೆಗಳು ವ್ಯಾಪಕ ಚರ್ಚೆಯಲ್ಲಿವೆ.
Z ನ ರಹಸ್ಯವೇನು ?
ರಷ್ಯಾ ಮತ್ತು ಉಕ್ರೇನ್ ಮೊದಲು ಯುಎಸ್‌ಎಸ್‌ಆರ್‌ನ ಭಾಗವೇ ಆಗಿದ್ದರಿಂದ ಎರಡೂ ದೇಶಗಳ ಜನರ ನಡುವೆ ಅಷ್ಟೇ ಅಲ್ಲ, ಮಿಲಿಟರಿ ಉಪಕರಣ, ಮಿಲಿಟರಿ ವಾಹನಗಳಲ್ಲೂ ಸಾಮ್ಯವಿದೆ. ಇದರಿಂದ ಉಕ್ರೇನ್‌ನೊಳಗೆ ನುಗ್ಗಿರುವ ರಷ್ಯಾ ಸೈನ್ಯಕ್ಕೆ ತನ್ನ ದೇಶದ ವಾಹನಗಳು ಮತ್ತು ಉಕ್ರೇನ್ ಸೈನ್ಯದ ವಾಹನ, ಮಿಲಿಟರಿ ಉಪಕರಣಗಳ ವ್ಯತ್ಯಾಸ ಗೊತ್ತಾಗದಿರುವ ಸಾಧ್ಯತೆ ಇದೆ. ಇದರಿಂದ ರಷ್ಯಾ ಸೈನ್ಯಕ್ಕೆ ತನ್ನದೇ ಸೇನಾ ವಾಹನಗಳು, ಯುದ್ಧ ಟ್ಯಾಂಕ್‌ಗಳ ಮೇಲೆ ತಾನೇ ದಾಳಿ ಮಾಡಿಕೊಳ್ಳುವ ಆತಂಕವಿದೆ. ಈ ಹಿನ್ನೆಲೆಯಲ್ಲಿ ರಷ್ಯಾ ಸೈನ್ಯ ತನ್ನ ಎಲ್ಲಾ ಸೇನಾ ವಾಹನಗಳು ಮತ್ತು ಯುದ್ಧ ಟ್ಯಾಂಕ್‌ಗಳ ಮೇಲೆ z ಚಿಹ್ನೆಯನ್ನು ಅಳವಡಿಸಿದೆ. ರಷ್ಯಾದ ಎಲ್ಲ ಯುದ್ಧ ಟ್ಯಾಂಕರ್‌ಗಳು, ಮಿಲಿಟರಿ ಜೀಪ್‌ಗಳು ಮತ್ತಿತರ ಸೇನಾ ವಾಹನಗಳ ಮೇಲೆ ಬಿಳಿ ಬಣ್ಣದಲ್ಲಿ z ಚಿಹ್ನೆಯನ್ನು ಬರೆಯಲಾಗಿದೆ.
x ಚಿಹ್ನೆಯ ಬಗ್ಗೆ ಎಚ್ಚರಿಸಿದ ಉಕ್ರೇನ್ ಸರ್ಕಾರ
ಉಕ್ರೇನ್‌ನ ಕೆಲ ನಿರ್ಧಿಷ್ಟ ಕಟ್ಟಡಗಳು, ಮನೆಗಳು, ಗ್ಯಾಸ್ ಗೋಡೌನ್‌ಗಳು ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಕೆಂಪು ಬಣ್ಣದಲ್ಲಿ ಬರೆಯಲಾದ x ಚಿಹ್ನೆ ಕಂಡುಬರುತ್ತಿದೆ. ಈ ಬಗ್ಗೆ ಉಕ್ರೇನ್‌ನ ಆಂತರಿಕ ಭದ್ರತಾ ಇಲಾಖೆ ತನ್ನ ನಾಗರಿಕರಿಗೆ ಎಚ್ಚರಿಕೆ ನೀಡಿದೆ.
ರಷ್ಯಾ ಸೈನ್ಯ ಕ್ಷಿಪಣಿ ದಾಳಿ ನಡೆಸುವ ಗುರುತಿಗಾಗಿ x ಚಿಹ್ನೆಯನ್ನು ಬರೆಯುತ್ತಿದೆ. ಇಂಥಹ ಚಿಹ್ನೆ ಕಂಡುಬಂದಲ್ಲಿ ಅದನ್ನು ಬೇರೆ ಬಣ್ಣದಿಂದ ಅಳಿಸಿರಿ. ಮನೆ, ಕಟ್ಟಡಗಳ ಮೇಲೆ x ಚಿಹ್ನೆ ಕಂಡುಬಂದರೆ ಅಂಥಹ ಕಟ್ಟಡಗಳಿಂದ ಬೇರೆಡೆ ಸ್ಥಳಾಂತರಗೊಳ್ಳಿ ಎಂಬ ಎಚ್ಚರಿಕೆಯನ್ನು ನೀಡಲಾಗಿದೆ.
ಅಂತರಾಷ್ಟ್ರೀಯ ಶೂಟಿಂಗ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಸೌರಭ್ ಚೌದರಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ