Kannada NewsKarnataka NewsLatest

137 ವರ್ಷ ಪೂರೈಸಿದ ಶತಮಾನದ ಶಾಲೆ; ಲೋಕಾರ್ಪಣೆಗೆ ಸಜ್ಜಾಗಿದೆ ವಿಜ್ಞಾನ ಪ್ರಯೋಗಾಲಯ, ಹಲವು ಸೌಲಭ್ಯಗಳು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಲ್ಲೋಳಿಗೆ ಶಾಲೆಯ ಅವಶ್ಯಕವಿದೆ ಎಂದು ಅರಿತು ಶಾಲೆಯನ್ನು ಆರಂಭಿಸಿದ ಶ್ರೇಯಸ್ಸು ಪರಪ್ಪಗೌಡ ಈರಪ್ಪಗೌಡ ಪಾಟೀಲ್ ಅವರದ್ದು. 1885 ರಲ್ಲಿ ರಾಮಲಿಂಗೇಶ್ವರ ಗುಡಿಯ ಹತ್ತಿರ ಧರ್ಮ ಶಾಲೆ ಗಜಲಕ್ಷ್ಮೀ ದೇವಿಯ ಸನ್ನಿಧಿಯಲ್ಲಿ ಇಬ್ಬರು ವಿದ್ಯಾರ್ಥಿಗಳೊಂದಿಗೆ ಆರಂಭವಾಯಿತು. ಅಂದು ಆರಂಭವಾದ ಶಾಲೆ 137 ವರ್ಷಗಳನ್ನು ಪೂರೈಸಿ ಇಂದಿಗೂ ಕಾರ್ಯನಿರ್ವಹಿಸುತ್ತಿದೆ.

ಸ್ಪಾರ್ಕ್ ಯೋಜನೆಯ ಮುಖಾಂತರ ನಾಡಿನ ಶಾಲಾ ಮಕ್ಕಳಿಗೆ ವಿಜ್ಞಾನದ ಪ್ರಯೋಗಗಳನ್ನು ಯುವಾ ಬ್ರಿಗೇಡ್ ತಲುಪಿಸುವ ಪ್ರಯತ್ನ ಮಾಡಿತ್ತು. ಅದರ ಮುಂದುವರೆದ ಭಾಗವಾಗಿ ‘ಸೈನ್ಸ್ ಲ್ಯಾಬ್’ ನಿರ್ಮಿಸಲು ಆಯ್ದುಕೊಂಡದ್ದೇ ಕಲ್ಲೋಳಿಯ ಈ ಶಾಲೆಯನ್ನು. ಆದರೆ ವಿಜ್ಞಾನದ ಪ್ರಯೋಗಾಲಯವನ್ನು ನಿರ್ಮಿಸಲು ಸೂಕ್ತ ಕಟ್ಟಡದ ಕೊರತೆ ಇತ್ತು. ನಮ್ಮ ಆಸಕ್ತಿ ಮತ್ತು ಯೋಜನೆಯ ಮಹತ್ವವನ್ನು ಮನಗಂಡ ಗ್ರಾಮಸ್ಥರು ಅವರೇ ಸ್ವತಃ ಶಾಲೆಯ ಅಭಿವೃದ್ಧಿಗೆ ಮುಂದಾದರು.

ಶಾಲೆಯ ಬಗ್ಗೆ ಗ್ರಾಮದ ಜನರಿಗಿರುವ ಅಭಿಮಾನ ನಿಜಕ್ಕೂ ಮೆಚ್ಚುವಂತದ್ದು. ಶಾಲೆಯ ದುಸ್ಥಿತಿಯನ್ನು ಅರಿತ ಗ್ರಾಮಸ್ಥರು ಒಂದೊಂದು ಸೌಕರ್ಯಗಳನ್ನು ಒದಗಿಸಲು ಸ್ವತಃ ಮುಂದೆ ಬಂದರು. ದಾನಿಗಳು ಮತ್ತು ಅಭಿವೃದ್ಧಿ ಚಟುವಟಿಕೆಗಳ ನಡುವಿನ ಸೇತುವೆಯಾಗಿ ಯುವಾ ಬ್ರಿಗೇಡ್ ಕಾರ್ಯನಿರ್ವಹಿಸಿ ಶಾಲೆಗೆ ಪುನರ್ ಕಾಯಕಲ್ಪ ನೀಡಿತು‌.

ಈಗ ಶಾಲೆ ಸುಸಜ್ಜಿತ ಛಾವಣಿ, ಎಲ್ಲ ತರಗತಿಗಳಿಗೆ ವಿದ್ಯುತ್ ಸಂಪರ್ಕ, ಸ್ಮಾರ್ಟ್ ಕ್ಲಾಸ್, ಕುಡಿಯುವ ನೀರಿನ RO ಯಂತ್ರ, ಬೆಂಚುಗಳು ಹೀಗೆ ಹಲವಾರು ಸೌಲಭ್ಯಗಳನ್ನು ಪಡೆದಿದೆ. ಯುವಾ ಬ್ರಿಗೇಡ್‌ನ ವಿಜ್ಞಾನ ಪ್ರಯೋಗಾಲಯವೂ( ಸೈನ್ಸ್ ಲ್ಯಾಬ್) ಲೋಕಾರ್ಪಣೆಗೆ ಸಜ್ಜಾಗಿದೆ. ಇದರ ಲಾಭವನ್ನು ವಿದ್ಯಾರ್ಥಿಗಳು ಪಡೆದುಕೊಂಡರೆ ನಮ್ಮ ಈ ಪ್ರಯತ್ನ ಸಾರ್ಥಕ ಎನ್ನುತ್ತಾರೆ ಸೌಲಭ್ಯ ನೀಡಿದ ದಾನಿಗಳು, ಶಾಲಾ ಆಡಳಿತ ಮಂಡಳಿಯವರು.

ಸರಕಾರಿ ಶಾಲೆಯನ್ನು ಪುನರ್ ನಿರ್ಮಿಸುವ ಮೂಲಕ ಕನ್ನಡ ಉಳಿಸುವ ಕೆಲಸದಲ್ಲಿ ಸಹಕರಿಸಿದ ಎಲ್ಲ ಕನ್ನಡದ ಮನಸ್ಸುಗಳಿಗೆ ಶಾಲಾ ಆಡಳಿತ ಮಂಡಳಿಯವರು, ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಅಜಯ್ ದೇವಗನ್ ಹೊಸ ಚಿತ್ರಕ್ಕೆ ಕಾನೂನು ಕಂಟಕ :ಬಾಲಿವುಡ್ ಗೆ ಮತ್ತೆ ಆಘಾತ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button