ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ 2020ರ ಜನೆವರಿ 10ರಂದು ಅಧಿಕಾರ ವಹಿಸಿಕೊಂಡ ಘೂಳಪ್ಪ ಹೊಸಮನಿ ಮತ್ತು ಆಯುಕ್ತರಾಗಿ ಕೆಲಸ ನಿರ್ವಹಿಸುತ್ತಿರುವ ಕ್ರಿಯಾಶೀಲ ಅಧಿಕಾರಿ ಪ್ರೀತಂ ನಸ್ಲಾಪುರೆ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹೊಸ ಸ್ಪರ್ಷ ನೀಡಿದ್ದಾರೆ.
ನಗರಾಭಿವೃದ್ಧಿ ಪ್ರಾಧಿಕಾರದ ಅವಶ್ಯಕತೆ ಏನು? ಕೇವಲ ಸಿಬ್ಬಂದಿಗೆ ವೇತನ ನೀಡುವುದಷ್ಟೇ ಇದರ ಕೆಲಸವೇನೋ ಎನ್ನುವ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಈ ಇಬ್ಬರ ಜೋಡಿ ಬುಡಾಕ್ಕೆ ಜೀವಕಳೆ ತುಂಬಿದೆ.
ಹೊಸ ಬಡಾವಣೆ ನಿರ್ಮಾಣಕ್ಕೆ ಯೋಜನೆ, ಅನೇಕ ಹೊಸ ಹೊಸ ಯೋಜನೆಗಳಿಗೆ ಅನುದಾನ, ನಿರಾಕ್ಷೇಪಣಾ ಪತ್ರ ಸೇರಿದಂತೆ ಜನರಿಗೆ ತ್ವರಿತ ಗತಿಯ ಸ್ಪಂದನೆ, ಅದೆಲ್ಲಕ್ಕಿಂತ ಹೆಚ್ಚಾಗಿ ಅಕ್ರಮ ಬಡಾವಣೆಗಳ ವಿರುದ್ಧ ಸಮರ ಕಳೆದ ಸಾಲಿನಲ್ಲಿ ಬುಡಾದ ಪ್ರಮುಖ ಸಾಧನೆಗಳಾಗಿವೆ.
ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕಣಬರ್ಗಿ ಗ್ರಾಮದ 160 ಎಕರೆ -10 ಗುಂಟೆ -14 ಅಣೆ ಕ್ಷೇತ್ರದ ವಿಸ್ತೀರ್ಣದಲ್ಲಿ ಹೊಸ ಬಡಾವಣೆ ನಿರ್ಮಿಸಲು ಉದ್ದೇಶಿಸಲಾಗಿದೆ.
ಯೋಜನೆ ಸಂಖ್ಯೆ -61 ಹೊಸ ಬಡಾವಣೆಗೆ ಸರಕಾರದಿಂದ ಅನುಮೋದನೆ ಪಡೆಯಲಾಗುತ್ತಿದೆ.
ಈ ಯೋಜನೆಯಲ್ಲಿ ವಿವಿಧ ಅಳತೆಯ ಜಿ-3 ಮಾದರಿಯ ನಿವೇಶನಗಳನ್ನು ರೂಪಿಸಲು ಉದ್ದೇಶಿಸಿಲಾಗಿದೆ ಹಾಗೂ ಒಟ್ಟು 24 ಎಕರೆ -20 ಗುಂಟೆ ವಿಸ್ತೀರ್ಣದ 2760 ವಿವಿಧ ಅಳತೆಯ ಮನೆಗಳ ಒಟ್ಟು ಸಂಕೀರ್ಣಗಳ ಸಮುಚ್ಚಯ ನಿರ್ಮಿಸಲು ಉದ್ದೇಶಿಸಲಾಗಿದೆ.
ಹಾಕಿ ಇಂಡಿಯಾ ಬೆಳಗಾವಿ ಇವರಿಗೆ ಇಂಟರನ್ಯಾಷನಲ್ ಎಸ್ಪಟರ್ಫ ಹಾಕಿ ಮೈದಾನವನ್ನು ಅಭಿವೃಪಡಿಸಲು ಪ್ರಾಧಿಕಾರದಿಂದ ಯೋಜನೆ ಸಂಖ್ಯೆ 35 + 43 + 43 ಎ ರಾಮತೀರ್ಥ ನಗರದಲ್ಲಿಯ ಕಣಬರ್ಗಿ ಗ್ರಾಮದ ರಿ.ಸ.ನಂ. 623 ಮತ್ತು 624 ರಲ್ಲಿಯ ಸುಮಾರು 40000 ಚ.ಮೀ ಖುಲ್ಲಾ ಜಾಗೆಯಲ್ಲಿ ನೀಡಲಾಗಿದೆ.
ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ರೂ. 2863.50 ಅಂದಾಜು ವೆಚ್ಚದಲ್ಲಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸರಕಾರದಿಂದ ಅನುಮೋದನೆ ನೀಡಲಾಗಿದ್ದು, ಕಾಮಗಾರಿಗಳ ಅನುಷ್ಠಾನಕ್ಕಾಗಿ ಟೆಂಡರ್ ಕರೆಯಲಾಗಿದೆ.
ಬೆಳಗಾವಿ ನಗರದ ಶಿವಾಜಿ ಉದ್ಯಾನವನದಲ್ಲಿ ಸುಮಾರು ರೂ . 5.00 ಕೋಟಿ ಅಂದಾಜು ವೆಚ್ಚದಲ್ಲಿ ಶಿವ ಚರಿತ್ರೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ .
ಬೆಳಗಾವಿ ನಗರದಲ್ಲಿ ಸುಮಾರು ರೂ. 5 ಕೋಟಿ ಅಂದಾಜು ವೆಚ್ಚದಲ್ಲಿ ಉದ್ಯಾನವನ ಅಭಿವೃದ್ಧಿಗೊಳಿಸಲಾಗುತ್ತಿದೆ. ಪ್ರಾ ಧಿಕಾರದಿಂದ ನಿರ್ಮಿಸಲಾದ ಯೋಜನೆ ಸಂಖ್ಯೆ 5 ಜಿ ಎಚ್ ಡಿ ಕುಮಾರಸ್ವಾಮಿ ಬಡಾವಣೆಯಲ್ಲಿ ರೂ.500 ಲಕ್ಷ ಮೊತ್ತದ ಅಭಿವೃದ್ಧಿ ಕಾಮಗಾರಿಗಳು ಮುಗಿಯುವ ಹಂತದಲ್ಲಿವೆ. ಶೀಘ್ರದಲ್ಲಿ ಬಡಾವಣೆಯನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಲಾಗುವುದು. ಪ್ರಾಧಿಕಾರದ ಯೋಜನೆ ಸಂಖ್ಯೆ 35 + 43 ++ 43 ಎ ರಾಮತೀರ್ಥ ನಗರ ಬಡಾವಣೆಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಟೆಂಡರ್ ಕರೆದಿದ್ದು ಹಾಗೂ ಆದಷ್ಟು ಬೇಗನೆ ಪೂರ್ತಿಗೊಳಿಸಲಾಗುವುದು. ಬಡಾವಣೆಯಲ್ಲಿ ರೂ.550.00 ಲಕ್ಷದ ಅಂದಾಜು ವೆಚ್ಚದ ಸುಸಜ್ಜಿತ ಸಮುದಾಯ ಭವನ ಮತ್ತು ರೂ. 300 ಲಕ್ಷದ ಅಂದಾಜು ವೆಚ್ಚದ ವಾಣಿಜ್ಯ ಮಳಿಗೆ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ಬೆಳಗಾವಿ ಬುಡಾ ಅಧ್ಯಕ್ಷನಾಗಿ ಒಂದು ವರ್ಷ ಕಳೆದಿದ್ದು, ಈ ಅವಧಿಯಲ್ಲಿ ಬುಡಾದಿಂದ ಅಭಿವೃದ್ಧಿ ಕೆಲಸಗಳು ನಾಗಾಲೋಟದಿಂದ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕನಸಿನಂತೆ ೨೦೨೨ ಕ್ಕೆ ಎಲ್ಲರಿಗೂ ಸೂರು ಒದಗಿಸಲಾಗುತ್ತದೆ. ಬರುವ ದಿನಗಳಲ್ಲಿ ಹಲವು ಯೋಜನೆಗಳನ್ನು ಹಮ್ಮಿಕೊಳ್ಳುವ ಉದ್ದೇಶ ಇದೆ. ಬೆಳಗಾವಿಯ ಸಮಗ್ರ ಅಭಿವೃದ್ಧಿಗೆ ಬುಡಾ ಅನುಪಮ ಕಾಣಿಕೆ ನೀಡಲಿದ್ದು, ಒಟ್ಟಾರೆ, ಬೆಳಗಾವಿಗೆ ಹೊಸ ರೂಪ ನೀಡಲಾಗುವುದು.-ಘೂಳಪ್ಪ ಹೊಸಮನಿ, ಅಧ್ಯಕ್ಷ, ಬುಡಾ, ಬೆಳಗಾವಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ