Film & EntertainmentKarnataka News

*ಚೈತ್ರಾ ಕುಂದಾಪುರ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ತಂದೆ; ದೂರು ದಾಖಲು*

ಪ್ರಗತಿವಾಹಿನಿ ಸುದ್ದಿ: ಬಿಗ್ ಬಾಸ್ ಮಾಜಿ ಸ್ಪರ್ಧಿ ಚೈತ್ರಾ ಕುಂದಾಪುರ ಇತ್ತೀಚೆಗೆ ತನ್ನ ಹಲವು ವರ್ಷಗಳ ಸ್ನೇಹಿತ ಶ್ರೀಕಾಂತ್ ನನ್ನು ವಿವಾಹವಾಗಿದ್ದು, ಚೈತ್ರಾ ಮದುವೆ ಬಳಿಕ ಅವರ ತಂದೆ ಬಾಲಕೃಷ್ಣ ನಾಯಕ್ ಮಗಳ ವಿರುದ್ಧ ಸಾಲು ಸಾಲು ಆರೋಪ ಮಾಡಿದ್ದರು. ಇದೀಗ ಪೊಲೀಸ್ ಠಾಣೆ ಮೆಟ್ತಿಲೇರಿರುವ ಘಟನೆ ನಡೆದಿದೆ.

ಮಗಳು ಚೈತ್ರಾ ಕುಂದಾಪುರ ತನಗೆ ಕೊಲೆ ಬೆದರಿಕೆ ಹಾಕಿದ್ದಾಳೆ. ಆಸ್ತಿಗಾಗಿ ಆಕೆ ತನ್ನನ್ನು ಕೊಲೆ ಮಾಡಲೂಬಹುದು ನನಗೆ ರಕ್ಷಣೆ ನೀಡಿ ಎಂದು ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಚೈತ್ರಾ ಕುಂದಾಪುರ ಅವರ ಹಣದ ವ್ಯವಹಾರ ಸೇರಿದಂತೆ ಹಲವು ವಿಚಾರಗಳ ಬಗ್ಗೆ ದೂರುನಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

ಶ್ರೀಕಾಂತ್ ಜೊತೆ ಚೈತ್ರಾ ವಿವಾಹಕ್ಕೆ ನನ್ನ ಒಪ್ಪಿಗೆ ಇರಲಿಲ್ಲ. ನಾನು ಶ್ರೀಕಾಂತ್ ನನ್ನು ಬಿಟ್ಟು ಬೇರೆಯವರನ್ನು ಮದುವೆಯಾಗು ಆತ ಸರಿಯಿಲ್ಲ ಎಂದಿದ್ದೆ. ಆಗ ಚೈತ್ರಾ ಮನೆಗೆ ಬಂದು ಬೇರೆಯವರನ್ನು ಮದುವೆಯಾಗಬೇಕು ಎಂದರೆ 5 ಲಕ್ಷ ಹಣ ಕೊಡು ಎಂದು ಒತ್ತಾಯಿಸಿದ್ದಳು. ಬಳಿಕ ಮದುವೆಗೆ ಬರದಿದ್ದರೆ ಭೂಗತ ದೊರೆಗಳ ಮೂಲಕ ಹತ್ಯೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾಳೆ.

ಆಸ್ತಿಗಾಗಿ ಆಕೆ ಯಾವ ಮಟ್ಟಕ್ಕೂ ಇಳಿಯುತ್ತಾಳೆ ನನಗೆ ಕೊಲೆ ಬೆದರಿಕೆ ಹಾಕಿದ್ದು ರಕ್ಷಣೆ ನೀಡುವಂತೆ ದೂರಿನಲ್ಲಿ ತಿಳಿಸಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button