Kannada NewsKarnataka NewsLatestPolitics

*33 ಹೊಸ ತಳಿ ಬಿಡುಗಡೆಗೆ ಶಿಫಾರಸು; ಕೃಷಿ ಸಚಿವ ಎನ್ ಚಲುವರಾಯಸ್ವಾಮಿ*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ರೋಗ ನಿರೋಧಕ, ಕೀಟ ನಿರೋಧಕ ಹಾಗೂ ಅಧಿಕ ಇಳುವರಿ ತಳಿಗಳನ್ನು ಅಭಿವೃದ್ಧಿಪಡಿಸಲು
ಕೃಷಿ ವಿವಿಗಳು ನಿರಂತರವಾಗಿ ಸಂಶೋಧನೆ ನಡೆಸುತ್ತಿವೆ 2023-24ನೇ ಸಾಲಿನಲ್ಲಿ ಒಟ್ಟು 31 ತಳಿ /ಸಂಕರಣಗಳನ್ನು ಬಿಡುಗಡೆ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಒಟ್ಟು 33 ತಳಿ/ಸಂಕರಣಗಳನ್ನು ಬಿಡುಗಡೆ ಮಾಡಲು ಶಿಫಾರಸ್ಸು ಮಾಡಲಾಗಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ಕೋಲಾರ ಶಾಸಕ ಕೊತ್ತನೂರು ಮಂಜುನಾಥ್ ಅವರು ವಿಧಾನಸಭೆಯಲ್ಲಿ ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳನ್ನು ಒದಗಿಸುವ ನಿಟ್ಟಿನಲ್ಲಿ ರಾಷ್ಟ್ರಮಟ್ಟದಲ್ಲಿ ಕೇಂದ್ರೀಯ ಬೀಜ ಸಮಿತಿ ಹಾಗೂ ರಾಜ್ಯ ಮಟ್ಟದಲ್ಲಿ ರಾಜ್ಯ ಬೀಜ ಉಪಸಮಿತಿಯನ್ನು ರಚಿಸಲಾಗಿದ್ದು, ಪ್ರತಿರ‍್ಷ ಕೃಷಿ ವಿಶ್ವ ವಿದ್ಯಾಲಯಗಳಿಂದ ಅಭಿವೃದ್ಧಿಪಡಿಸಲಾಗುವ ರೋಗ ನಿರೋಧಕ, ಕೀಟ ನಿರೋಧಕ ಹಾಗೂ ಅಧಿಕ ಇಳುವರಿ ತಳಿಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಬಿಡುಗಡೆಗೆ ಕ್ರಮವಹಿಸಲಾಗುತ್ತಿದೆ ಎಂದರು.

ಬಿತ್ತನೆಗೆ ಲಭ್ಯವಿರುವ ಬೀಜಗಳನ್ನು ತಳಿಗಳು, ಸಂಕರಣ ಹಾಗೂ ತಳಿಯಿಂದ ಮರ‍್ಪಡಿಸಿದ ಬೆಳೆಗಳು ಎಂದು ವಿಂಗಡಿಸಲಾಗಿದೆ. ಪ್ರತಿತಳಿ /ಸಂಕರಣ /ತಳಿಯಿಂದ ಮರ‍್ಪಡಿಸಿದ ಬೆಳೆಗಳಿಗೆ ನರ‍್ದಿಷ್ಠ ರೋಗ/ ಕೀಟಕ್ಕೆ ನಿರೋಧಕ ಶಕ್ತಿಯಿರುತ್ತದೆ. ಅಂತಹರೋಗ/ ಕೀಟಹೊರತುಪಡಿಸಿ ಇತರೆ ರೋಗ/ ಕೀಟದ ಬಾಧೆ ಕಂಡುಬಂದಲ್ಲಿ ಸಸ್ಯಸಂರಕ್ಷಣಾ ಔಷಧಿಗಳ ಸಿಂಪಡಣೆ ಅನಿವರ‍್ಯವಾಗಿರುತ್ತದೆ ಎಂದು ಅವರು ಹೇಳಿದರು

ಅಲ್ಲದೆ, ಹವಾಮಾನ ವೈಪರೀತ್ಯಗಳಾದ ಉಷ್ಣಾಂಶ, ತೇವಾಂಶ ಹಾಗೂ ಮಳೆಯಲ್ಲಿ ಬದಲಾವಣೆ ಹಾಗೂ ರೈತರು ಅನುಸರಿಸುವ ಬೇಸಾಯ ಪದ್ಧತಿಗಳಿಂದ ಕೀಟ/ ರೋಗಗಳ ಬಾಧೆ ಹೆಚ್ಚಾಗಿ ಸಸ್ಯಸಂರಕ್ಷಣಾ ಔಷಧಿಗಳ ಸಿಂಪರಣೆ ಅನಿವರ‍್ಯವಾಗಿರುತ್ತದೆ ಎಂದು ಎನ್.ಚಲುವರಾಯಸ್ವಾಮಿರವರು ಉತ್ತರಿಸಿದರು.

ರಾಜ್ಯದ ಎಲ್ಲಾ ವರ್ಗದ ರೈತರಿಗೆ ಗರಿಷ್ಠ 2 ಹೆಕ್ಟೇರ್ ಮಿತಿಯೊಳಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳನ್ನು ಸರಬರಾಜು ಮಾಡಲು ‘ಕೃಷಿ ಪರಿಕರಗಳು ಮತ್ತು ಗುಣಮಟ್ಟ ನಿಯಂತ್ರಣ ’ಯೋಜನೆಯಡಿ “ಬೀಜಗಳ ಪೂರೈಕೆ” ಕರ‍್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಈ ಸಲುವಾಗಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕ ಅಧಿನಿಯಮದಡಿ request for praposal ಕರೆದು ಬೇಡಿಕೆಯನ್ವಯ ಬೀಜ ದಾಸ್ತಾನು ಮಾಡಿ ವಿತರಣೆ ಮಾಡಲಾಗುತ್ತಿದೆ ಎಂದು ಕೃಷಿ ಸಚಿವರು ಮಾಹಿತಿ ನೀಡಿದರು.

ರಾಜ್ಯ ರ‍್ಕಾರದ ‘ಕೃಷಿ ಪರಿಕರಗಳು ಮತ್ತು ಗುಣಮಟ್ಟ ನಿಯಂತ್ರಣ’ ಯೋಜನೆಯಡಿ “ಬೀಜಗಳ ಪೂರೈಕೆ” ಕರ‍್ಯಕ್ರಮದಲ್ಲಿ 2023-24ನೇ ಸಾಲಿನಲ್ಲಿ 6.12ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜಗಳನ್ನು ರೂ.15530.42 ಲಕ್ಷಗಳ ರಿಯಾಯಿತಿ ದರದಲ್ಲಿ 13.08 ಲಕ್ಷ ರೈತರಿಗೆ ವಿತರಿಸಲಾಗಿರುತ್ತದೆ.

ರೈತ ಸಂಪರ್ಕ ಕೇಂದ್ರಗಳು ಹಾಗೂ ಗುರುತಿಸಿದ ಮಾರಾಟ ಕೇಂದ್ರಗಳ ಮುಖಾಂತರ ಸಕಾಲದಲ್ಲಿ ಬಿತ್ತನೆ ಬೀಜ ಸರಬರಾಜು ಮಾಡಲು ಹಾಗೂ ಸಮೀಪದಲ್ಲಿಯೇ ಬಿತ್ತನೆ ಬೀಜಗಳನ್ನು ದೊರಕಿಸುವ ಸಲುವಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಆಯ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕವು ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದರು.

ರೈತರಿಗೆ ಜೋಳ, ಸಜ್ಜೆ, ಭತ್ತ, ರಾಗಿಗೋಧಿ, ಉದ್ದು, ಹೆಸರು, ಅಲಸಂದೆ, ಮೆಕ್ಕೆಜೋಳ, ತೊಗರಿ, ನೆಲಗಡಲೆ, ತೃಣಧಾನ್ಯಗಳು, ಕಡಲೆ, ಕುಸುಬೆ, ಸೋಯಾ ಅವರೆ ಮತ್ತು ಸರ‍್ಯಕಾಂತಿ ಬೆಳೆಗಳ ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ ಸಕಾಲದಲ್ಲಿ ವಿತರಿಸಲಾಗುತ್ತದೆ ಎಂದು ತಿಳಿಸಿದರು.

ರಾಜ್ಯದಲ್ಲಿ ನಕಲಿ ಬೀಜ ಮಾರಾಟ ತಡೆಗಟ್ಟಲು ಮತ್ತು ರೈತರಿಗೆ ಗುಣಮಟ್ಟದ ಬೀಜವಿತರಿಸಲು ರಾಜ್ಯದಲ್ಲಿ ಕೇಂದ್ರ ರ‍್ಕಾರ ರೂಪಿಸಿರುವ ಬೀಜ ಕಾಯ್ದೆಗಳು (ಬೀಜಕಾಯ್ದೆ, 1966, ಬೀಜ ಅಧಿನಿಯಮ 1968 ಮತ್ತು ಬೀಜ ನಿಯಂತ್ರಣ ಆದೇಶ, 1983) ಮತ್ತು ಅಗತ್ಯ ವಸ್ತುಗಳ ಕಾಯ್ದೆ, 1955 ಜಾರಿಯಲ್ಲಿದ್ದು, ಸದರಿ ಆದೇಶ/ ಕಾಯ್ದೆಗಳನ್ವಯ ಜಿಲ್ಲೆಯ ಜಂಟಿ ಕೃಷಿ ನರ‍್ದೇಶಕರು, ಉಪ ಕೃಷಿ ನರ‍್ದೇಶಕರು, ಸಹಾಯಕ ಕೃಷಿ ನರ‍್ದೇಶಕರು, ಕೃಷಿ ಅಧಿಕಾರಿಗಳು ಹಾಗೂ ಕೃಷಿ ಪದವಿ ಹೊಂದಿರುವ ಸಹಾಯಕ ಕೃಷಿ ಅಧಿಕಾರಿಗಳನ್ನು ಬೀಜ ಪರಿವೀಕ್ಷಕರು ಎಂದು ಅಧಿಸೂಚಿಸಲಾಗಿರುತ್ತದೆ.

ಕೃಷಿ ಇಲಾಖೆಯಿಂದ ಸಹಾಯ ಧನದಲ್ಲಿ ನೀಡುತ್ತಿರುವ ವಿವಿಧ ಬೆಳೆಗಳ ಬಿತ್ತನೆ ಬೀಜ ಮಾದರಿಗಳನ್ನು ಇಲಾಖಾ ರೈತ ಸಂರ‍್ಕ ಕೇಂದ್ರಗಳಲ್ಲಿ ಹಾಗೂ ಖಾಸಗಿ ಮಾರಾಟ ಮಳಿಗೆಗಳಿಂದ ಸಂಗ್ರಹಿಸಿ, ವಿಶ್ಲೇಷಣೆಗೊಳಪಡಿಸಿ ಗುಣಮಟ್ಟದ ಬಗ್ಗೆ ಖಾತರಿ ಪಡಿಸಿಕೊಳ್ಳಲಾಗುತ್ತದೆ. ಒಂದು ವೇಳೆ, ಬಿತ್ತನೆ ಬೀಜಗಳು ಕಡಿಮೆ ಗುಣ ಮಟ್ಟದೆಂದು ಕಂಡು ಬಂದಲ್ಲಿ ಅಂತಹ ಬಿತ್ತನೆ ಬೀಜಗಳನ್ನು ರೈತರಿಗೆ ವಿತರಿಸಲಾಗುವುದಿಲ್ಲ ಹಾಗೂ ಸಂಬಂಧಿಸಿದ ಸಂಸ್ಥೆಗಳ ವಿರುದ್ಧ ಬಿತ್ತನೆ ಬೀಜ ಕಾಯ್ದೆಗಳನ್ವಯ ಮೊಕದ್ದಮೆ ಹೂಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೃಷಿ ಸಚಿವರು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button