Latest

ಮದುವೆಯಾಗುವುದಾಗಿ ನಂಬಿಸಿ ಯುವತಿ ಖಾಸಗಿ ಫೋಟೋ ಪಡೆದು ಬ್ಲಾಕ್ ಮೇಲ್

ಪ್ರಗತಿವಾಹಿನಿ ಸುದ್ದಿ; ಚಾಮರಾಜನಗರ: ಯುವತಿಯನ್ನು ಮದುವೆಯಾಗುವುದಾಗಿ ಹೇಳಿ ಪ್ರೀತಿಸಿ, ಆಕೆಯಿಂದ ಖಾಸಗಿ ಫೋಟೋಗಳನ್ನು ಪಡೆದು ವಂಚಿಸಿದ ವ್ಯಕ್ತಿ ಬಳಿಕ ಆಕೆಯ ಕುಟುಂಬದವರಿಗೆ ಯುವತಿಯ ಫೋಟೋ ರವಾನಿಸಿ ಬ್ಲಾಕ್ ಮೇಲ್ ಮಾಡುತ್ತಿದ್ದ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಸಧ್ಯ ಆರೋಪಿ ಪ್ರಶಾಂತ್ ನನ್ನು ಪೊಲೀಸರು ಬಂಧಿಸಿದ್ದಾರೆ. ಮದ್ದೂರಿನ ಟಿ.ಕೆ ಹಳ್ಳಿ ನಿವಾಸಿಯಾದ ಪ್ರಶಾಂತ್ ಕೊಳ್ಳೆಗಾಲ ಮೂಲದ ಯುವತಿಯನ್ನು ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ. ಯುವತಿ ಕೂಡ ಪ್ರಶಾಂತ್ ನನ್ನು ಮದುವೆಯಾಗುತ್ತಾನೆ ಎಂದು ನಂಬಿದ್ದಳು.

ಯುವತಿಯನ್ನು ನಂಬಿಸಿ ಆಕೆಯಿಂದ ಕೆಲ ಖಾಸಗಿ ಫೋಟೋಗಳನ್ನು ಪಡೆದುಕೊಂಡಿದ್ದ. ಆದರೆ ಮನೆಯಲ್ಲಿ ಇಬ್ಬರ ಪ್ರೀತಿ ವಿಚಾರ ತಿಳಿದಾಗ ಮದುವೆಗೆ ಒಪ್ಪಿರಲಿಲ್ಲ. ಇದೇ ಕಾರಣಕ್ಕೆ ಕೋಪಗೊಂಡ ಪ್ರಶಾಂತ್ ತನ್ನ ಬಳಿ ಇದ್ದ ಯುವತಿಯ ಖಾಸಗಿ ಫೋಟೋಗಳನ್ನು ಮನೆಯವರಿಗೆ ರವಾನಿಸಿ ಬೆದರಿಕೆಯೊಡ್ಡಲು ಆರಂಭಿಸಿದ್ದಾನೆ. ಇದರಿಂದ ನೊಂದ ಯುವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸಧ್ಯ ಆರೋಪಿ ಪ್ರಶಾಂತ್ ನನ್ನು ಪೊಲೀಸರು ಬಂಧಿಸಿದ್ದಾರೆ.

Related Articles

Back to top button