Latest

ಬಾಂಗ್ಲಾ ವಿಮಾನ ಹೈಜಾಕ್ ಯತ್ನ

ಢಾಕಾ (ಬಾಂಗ್ಲಾದೇಶ್):

ಬಾಂಗ್ಲಾದಿಂದ ದುಬೈಗೆ ಹೊರಟಿದ್ದ ವಿಮಾನವನ್ನು ವ್ಯಕ್ತಿಯೊಬ್ಬ  ಭಾನುವಾರ ಹೈಜಾಕ್ ಗೆ ಯತ್ನಿಸಿದ್ದ. ವಿಮಾನದಲ್ಲಿದ್ದ ಎಲ್ಲ 150 ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ರಾಷ್ಟ್ರೀಯ ನಾಗರಿಕ ವಿಮಾನಯಾನ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.

 ವಿಮಾನವು ಬಾಂಗ್ಲಾದೇಶ್ ರಾಜಧಾನಿ ಢಾಕಾದಿಂದ ಟೇಕ್ ಆಫ್ ಆಗಿದೆ. ಹೈಜಾಕ್ ಗೆ ಯತ್ನಿಸಿದ ವ್ಯಕ್ತಿಯ ಉದ್ದೇಶ ಏನು ಎಂಬುದು ಸ್ಪಷ್ಟವಾಗಿಲ್ಲ ಎಂದು ಏರ್ ವೈಸ್ ಮಾರ್ಷಲ್ ನಯೀಮ್ ಹಸನ್ ಹೇಳಿದ್ದಾರೆ.

ಅತನಿಗೆ ಮಾನಸಿಕ ಸ್ಥಿಮಿತ ಇರಲಿಲ್ಲ. ತನ್ನ ಬಳಿ ಬಾಂಬ್ ಇದೆ ಎಂದು ಆತ ಹೇಳುತ್ತಿದ್ದ. ಆದರೆ ನಮಗೆ ಆ ಬಗ್ಗೆ ಖಾತ್ರಿ ಇಲ್ಲ ಎಂದು ಹಸನ್ ಹೇಳಿದ್ದಾರೆ. ಬಾಂಗ್ಲಾದೇಶ್ ನ ನೈರುತ್ಯ ಭಾಗದ ಚಿತ್ತಗಾಂಗ್ ನಲ್ಲಿ ವಿಮಾಣವನ್ನು ಇಳಿಸಲಾಗಿದೆ. ಅಲ್ಲಿ ಪ್ರಯಾಣಿಕರನ್ನು ತೆರವು ಮಾಡಲಾಗಿದೆ. ತನಿಖೆ ಮುಂದುವರಿದಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button