Election NewsPolitics

*ಚನ್ನಪಟ್ಟಣ ಉಪಚುನಾವಣೆ ರದ್ದು ಮಾಡುವಂತೆ ವಾಟಾಳ್ ನಾಗರಾಜ್ ಆಗ್ರಹ*

ಪ್ರಗತಿವಾಹಿನಿ ಸುದ್ದಿ: ಚನ್ನಪಟ್ಟಣ ಉಪಚುನಾವಣೆ ರದ್ದುಗೊಳಿಸುವಂತೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.

ಮೈಸೂರಿನಲ್ಲಿ ಚನ್ನಪಟ್ಟಣ ಉಪಚುನಾವಣೆ ರದ್ದು ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, ಚನ್ನಪಟ್ಟಣ ಉಪಚುನಾವಣೆ ರದ್ದುಗೊಳಿಸಬೇಕು. ಹೊಸದಾಗಿ ಅಧಿಸೂಚನೆ ಹೊರಡಿಸಬೇಕು. ಕಾರಣ ಚನ್ನಪಟ್ಟಣದಲ್ಲಿ ನಡೆಯುತ್ತಿರುವುದು ಉಪಚುನವಣೆಯಲ್ಲ ಅದು ದರೋಡೆ ಎಂದು ಕಿಡಿಕಾರಿದರು.

ಎರಡೂ ಪಕ್ಷದವರು ದರೋಡೆಗೆ ನಿಂತಿದ್ದಾರೆ. ಸಿದ್ದರಾಮಯ್ಯ ಅವರಿಂದ ಹಿಡಿದು ಎಲ್ಲರಿಗೂ ಮರ್ಯಾದೆ ಅಷ್ಟೇ. ಚುನಾವಣಾ ಆಯೋಗದವರು ಚನ್ನಪಟ್ಟಣದಲ್ಲಿ ಕ್ಯಾಂಪ್ ಮಾಡಲಿ. ಒಬ್ಬೊಬ್ಬರ ಬಳಿ 500 ಕೋಟಿ ರೂಪಾಯಿ ಇದೆ. ಒಂದು ವೋಟ್ ಗೆ 2,500ರಿಂದ ಲಕ್ಷದವರೆಗೂ ತಲುಪಿದೆ. ಹಾಗಾಗಿ ಮೊದಲು ಚುನಾವಣಾ ಆಯೋಗ ಮೊದಲು ಅಲ್ಲಿಗೆ ಧಾವಿಸಿ ಪ್ರಕರಣ ದಾಖಲಿಸಲಿ. ಚುನವಣೆ ರದ್ದುಗೊಳಿಸಿ ಮರು ಚುನಾವಣೆ ಘೋಷಿಸಲಿ ಎಂದರು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button