Belagavi NewsBelgaum NewsKannada NewsLatestPolitics

*ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ*

ಪ್ರಗತಿವಾಹಿನಿ ಸುದ್ದಿ: ಖಾನಾಪುರ: ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಮುಂದಿನ ವರ್ಷ ಜರುಗಲಿರುವ ಶ್ರೀ ಮಹಾಲಕ್ಷ್ಮಿ ದೇವಿಯ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಗ್ರಾಮದ ಮುಖಂಡರ ಉಪಸ್ಥಿತಿಯಲ್ಲಿ ಪೂರ್ವಭಾವಿ ಸಭೆ ನಡೆಸಿ, ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಇದೇ ವೇಳೆ ದೇವಸ್ಥಾನದ ಗೋಪುರ ಹಾಗೂ ಕಳಸದ ಕಾರ್ಯ, ಟೈಲ್ಸ್ ಅಳವಡಿಕೆ ಸೇರಿದಂತೆ ಎಲ್ಲ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಸಿ, ಹಿರಿಯರ ಸಲಹೆ ಪಡೆದು ನಿಗದಿತ ಅವಧಿಯಲ್ಲಿ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಜಿಕನೂರ್ ಹಾಗೂ ಗಾಡಿಕೊಪ್ಪ ಗ್ರಾಮಗಳ ಮುಖಂಡರು, ಸವಿತಾ ಸುತಗಟ್ಟಿ, ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಧರ್ ಲಾವಗಿ, ಸದಸ್ಯರಾದ ಭರತೇಶ ಜೋಳದ್, ಸಂಜಯ್ ಸುಳೇಭಾವಿ, ಬಾಬು ಪಚ್ಚೇದ್, ಅಶೋಕ ನೇಮಣ್ಣವರ, ಶ್ರೀಮಂತ ಜಿನಗೌಡ, ಅಪ್ಪಣ್ಣ ಸುಣಗಾರ್, ವಿವೇಕಾನಂದ ತಡಕೊಡ್, ವಿನೋದ್ ಗಡಾದ್, ಬಸನಪ್ಪ ಗಡಾದ್, ದೇವಸ್ಥಾನ ಸಮಿತಿಯ ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.

Home add -Advt

Related Articles

Back to top button