Kannada NewsLatest
ಡೆಂಟಲ್ ಆಸ್ಪತ್ರೆಯಲ್ಲಿಯೇ ಆತ್ಮಹತ್ಯೆಗೆ ಶರಣಾದ ಅಟೆಂಡರ್

ಪ್ರಗತಿವಾಹಿನಿ ಸುದ್ದಿ; ರಾಮದುರ್ಗ: ಆಸ್ಪತ್ರೆಯಲ್ಲಿಯೇ ಸಿಬ್ಬಂದಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ತೇರ್ ಬಜಾರ್ ನಲ್ಲಿ ನಡೆದಿದೆ.
ಶೀಲಾ ಡೆಂಟಲ್ ಕ್ಲಿನಿಕ್ ನಲ್ಲಿ ಈ ದುರಂತ ಸಂಭವಿಸಿದ್ದು, ಆಸ್ಪತ್ರೆಯ ಅಟೆಂಡರ್ ಆಗಿದ್ದ ಕಾಶಿನಾಥ್ ಪೇಟೆ (51) ಆಸ್ಪತ್ರೆಯಲ್ಲಿಯೇ ನೇಣುಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಕಾಶಿನಾಥ್ ರಾಮದುರ್ಗದ ಪಡಕೋಟಿಗಲ್ಲಿ ನಿವಾಸಿ.
ಡಾ.ಸಂಜೀವ ದಾನಿ ಅವರಿಗೆ ಸೇರಿದ ಹಲ್ಲಿನ ಆಸ್ಪತ್ರೆ ಇದಾಗಿದ್ದು, ಅಟೆಂಡರ್ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ರಾಮದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಷ್ಟ್ರ ರಾಜಧಾನಿಯಲ್ಲಿ ಮತ್ತೊಂದು ಬಿಭತ್ಸ್ಯ ಘಟನೆ; ಮಗನ ಜೊತೆ ಸೇರಿ ಪತಿಯನ್ನೇ 22 ತುಂಡುಗಳನ್ನಾಗಿ ಕತ್ತರಿಸಿದ ಪತ್ನಿ
https://pragati.taskdun.com/another-chilling-murder-in-delhi-woman-son-cut-mans-body-into-22-pieces/




