Belagavi NewsBelgaum NewsSports

*ಬೆಳಗಾವಿಯಲ್ಲಿ ಯಶಸ್ವಿಯಾಗಿ ನಡೆದ ಚೆಕ್ ದೇ ಮಹಿಳಾ ಕ್ರಿಕೆಟ್ ಟೂರ್ನಮೆಂಟ್‌*

ಪ್ರಗತಿವಾಹಿನಿ ಸುದ್ದಿ: ಬೈಲಹೊಂಗಲದ ಜೆಐಎಂಟ್ಸ್ ಗ್ರೂಪ್ ಆಫ್ ಬೆಳಗಾವಿ ಪ್ರೈಡ್ ಸಾಹೆಲಿ ಮತ್ತು ಎನ್‌ಎಕ್ಸ್ಟಿ ಲೆವೆಲ್ ಫಿಟ್‌ನೆಸ್‌ನ ಸಹಯೋಗದಲ್ಲಿ “ಚೆಕ್ ದೇ” ಮಹಿಳಾ ಓಪನ್ ಕ್ರಿಕೆಟ್ ಟೂರ್ನಮೆಂಟ್ ಅನ್ನು ಯಶಸ್ವಿಯಾಗಿ ಬೆಳಗಾವಿಯ ಕಿಕ್‌ಫ್ಲಿಕ್ಸ್ ಕ್ರಿಕೆಟ್ ಟರ್ಫ್‌ನಲ್ಲಿ ಆಯೋಜಿಸಲಾಯಿತು.

ಈ ಟೂರ್ನಮೆಂಟ್‌ಗೆ ಬೆಳಗಾವಿ ಮಹಾನಗರಪಾಲಿಕೆಯ ಮೇಯರ್ ಮಂಗೇಶ್ ಪವಾರ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ನಾಯಕಿ ಡಾ. ಸೋನಾಲಿ ಸಾರ್ನೋಬತ್, ಕಿಸ್ನಾ ಡೈಮಂಡ್‌ ಅಂಡ್‌ ಗೋಲ್ಡ್‌ನ ಮಾರ್ಕೆಟಿಂಗ್ ಮುಖ್ಯಸ್ಥೆ ಟ್ವಿಂಕಲ್, ಶ್ರೀ ರಾಮ್ ಇನವೇಶನ್ಸ್‌ನ ಮಾಲೀಕರಾದ ಸಚಿನ್ ಹಂಗಿರ್ಗೆಕರ, ಮುತೂಟ್ ಫಿನ್‌ಕಾಫ್‌ನ ಹಿರಾಲಾಲ್ ಹಾಗೂ ಅಂಬಿಕಾ ಹಾಗೂ ರಾಜ್ಯ ಮಟ್ಟದ ಕ್ರಿಕೆಟ್ ಆಟಗಾರ್ತಿ ಶ್ರೇಯಾ ಪೋಟೆ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಜೈಂಟ್ಸ್ ಪರಿವಾರದ ಯೂನಿಟ್ ಸೆಕ್ರೆಟರಿ ತ್ರಿವೇದಿ, ಕ್ರೀಡಾ ಸಂಯೋಜಕ ಗಂಗಾಧರ್ ಹಾಗೂ ಇತರ ಸದಸ್ಯರು ಕೂಡ ಉಪಸ್ಥಿತರಿದ್ದರು.

ಪಂದ್ಯದಲ್ಲಿ ಭಾಗವಹಿಸಿದ್ದ ತಂಡಗಳು:
GP ವಾರಿಯರ್ಸ್, OPL ಡೈನಾಮಿಕ್ ಗರ್ಲ್ಸ್, ಬೆಳಗಾವಿ ಪ್ಯಾಂಥರ್ಸ್, ಕೆಎಲ್‌ಇ ಟೈಟಾನ್ಸ್, ಬೆಳಗಾವಿ ಬ್ಯಾಶರ್ಸ್, ಯೋಗಿನೀಸ್, ಸ್ಕ್ವಾಡ್ ಇಂಡಿಯಾ, ಮತ್ತು ಪವರ್ ರೇಂಜರ್ಸ್.

ಈ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಲು ಹಲವಾರು ಸಂಸ್ಥೆಗಳ ಸಹಕಾರ ದೊರೆತಿದೆ. ಕಿಸ್ನಾ ಡೈಮಂಡ್ಸ್ ಅಂಡ್ ಗೋಲ್ಡ್ ಜ್ಯುವೆಲ್ಲರ್ಸ್, ಶ್ರೀ ರಾಮ್ ಇನವೇಶನ್ಸ್, ಶ್ರೀ ಚೈತನ್ಯ ಅಕಾಡೆಮಿ, ಮುತೂಟ್ ಫಿನ್‌ಕಾಫ್, ಡಾ. ಸರ್ನೋಬತ್ ಕ್ಲಿನಿಕ್, ಸಮರ್ಥ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿ, ಕಿರಣ್ ಏರ್‌ಕಾನ್, ದರಗಶೆಟ್ಟಿ ಸೇಲ್ಸ್ & ಕೋ-ಆಪ್, ಮತ್ತು ಮಂಜುನಾಥ್ ಅಳ್ವಾಣಿ,

ಆರತಿ ಶಾ (ಯೂನಿಟ್ ಡೈರೆಕ್ಟರ್), ಮೋನಾಲಿ ಶಾ (ಐಪಿಪಿ), ಕಾರ್ಯಕ್ರಮದ ಮುಖ್ಯಸ್ಥೆ ಅಸ್ಮಿತಾ ಜೋಶಿ, ಸಂತೋಷ್ ಚವಾಣ್, ಜೈಂಟ್ಸ್ ಪ್ರೈಡ್ ಸಾಹೆಲಿ ಅಧ್ಯಕ್ಷೆ ಜಿಗ್ನಾ ಶಾ, ಉಪಾಧ್ಯಕ್ಷೆ ರಶ್ಮಿ ಕದಂ ಹಾಗೂ ಸದಸ್ಯರು ಎಲ್ಲಾ ಸದಸ್ಯರು ಈ ಕಾರ್ಯಕ್ರಮದ ಯಶಸ್ಸಿಗೆ ಪ್ರಮುಖ ಪಾತ್ರವಹಿಸಿದ್ದರು.

“ಚೆಕ್ ದೇ” ಮಹಿಳಾ ಓಪನ್ ಕ್ರಿಕೆಟ್ ಟೂರ್ನಮೆಂಟ್ ಎಂಬುದು ಮಹಿಳಾ ಸಶಕ್ತೀಕರಣ ಹಾಗೂ ಕ್ರೀಡಾ ಸಾಮರ್ಥ್ಯವನ್ನು ಪ್ರತಿಬಿಂಬಿಸಿದ ಸ್ಮರಣೀಯ ಕಾರ್ಯಕ್ರಮವಾಗಿದ್ದು, ಬೆಳಗಾವಿಯ ಸಮುದಾಯಾಧಾರಿತ ಕ್ರೀಡಾಕೂಟಗಳಿಗೆ ಹೊಸ ಮಾದರಿ ನಿರ್ಮಿಸಿತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button