ಪ್ರಗತಿವಾಹಿನಿ ಸುದ್ದಿ; ಚಿಕ್ಕಮಗಳೂರು: ಕಾಲುವೆಯಲ್ಲಿ ಈಜಲು ಹೋಗಿ ದುರಂತವೊಂದು ಸಂಭವಿಸಿದೆ. ಆಟವಾಡುತ್ತಾ ಆಯತಪ್ಪಿ ಕಾಲುವೆಗೆ ಬಿದ್ದ ಮೂವರು, ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಿನ ತರಿಕೆರೆ ತಾಲೂಕಿನ ಭದ್ರಾ ಜಲಾಶಯದ ಬಳಿಯ ಕಾಲುವೆಯಲ್ಲಿ ನಡೆದಿದೆ.
ರವಿ (31), ಅನನ್ಯ (17), ಶಾಮವೇಣಿ (16) ಮೃತರು. ರವಿ ಲಕ್ಕವಳ್ಳಿಯ ನಿವಾಸಿಯಾಗಿದ್ದರೆ, ಅನನ್ಯ ಶಿವಮೊಗ್ಗ ಹಾಗೂ ಶಾಮವೇಣಿ ನಂಜನಗೂಡು ಮೂಲದವರು. ಸಂಬಂಧಿಕರ ಮನೆಗೆಂದು ಬಂದವರು ಭದ್ರಾ ಜಲಾಶಯದ ಬಳಿ ತೆರಳಿದ್ದರು.
ಈ ವೇಳೆ ಕಾಲುವೆ ನೀರಿನಲ್ಲಿ ಆಟವಾಡುವಾಗ ಆಯತಪ್ಪಿ ಕಾಲುವೆಗೆ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ ಮೃತ ದೇಹಗಳಿಗಗೈ ಶೋಧ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ