ಪ್ರಗತಿವಾಹಿನಿ ಸುದ್ದಿ; ಚಿಕ್ಕಮಗಳೂರು: ದೇಶಾದ್ಯಾಂತ ಕೊರೊನಾಆ ಭೀತಿ ಹೆಚ್ಚಿದ್ದು, ಲಾಕ್ ಡೌನ್ ಘೋಷಿಸಾಲಾಗಿದೆ. ಈ ಹಿನ್ನಲೆಯಲ್ಲಿ ನಿಶ್ಚಯವಾಗಿದ್ದ ಮದುವೆಗಳೆಲ್ಲ ಯಾವುದೇ ಆಡಂಬರ, ಅಬ್ಬರವಿಲ್ಲದೇ ಸರಳವಾಗಿ ನಡೆಯುತ್ತಿದೆ. ಈ ನಡುವೆ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯಲ್ಲಿ ವಧು-ವರರಿಬ್ಬರು ಮಾಸ್ಕ್ ಧರಿಸಿಯೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಹಲಸುಗುಡ್ಡೆ ಗ್ರಾಮದಲ್ಲಿ ಲಾಅಕ್ ಡೌನ್ ನಡುವೆ ವಧು-ವರರಿಬ್ಬರೂ ಮುಖಕ್ಕೆ ಮಾಸ್ಕ್ ಧರಿಸಿ ಪುರೋಹಿತರು ಹಾಗೂ ತಂದೆ-ತಾಯಿ ಸಮ್ಮುಖದಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದ್ದಾರೆ.
ಜಿಲ್ಲೆಯ ಬಣಕಲ್‍ನ ಚರ್ಚ್ ಹಾಲ್‍ನಲ್ಲಿ ಸುಶಾಂತ್ ಹಾಗೂ ನಿಶ್ಚಿತಾ ಮದುವೆ ನಿಗದಿಯಾಗಿತ್ತು. ಆದರೆ ಕೊರೊನಾ ಆತಂಕದಿಂದ ಇಡೀ ದೇಶ ಲಾಕ್‍ಡೌನ್ ಆಗಿರುವುದರಿಂದ ಅದ್ಧೂರಿ ಮದುವೆಯನ್ನ ರದ್ದು ಮಾಡಿ, ವಧುವಿನ ಸ್ವ-ಗ್ರಾಮದಲ್ಲಿ ಸರಳವಾಗಿ ವಿವಾಹ ನೆರವೇರಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ