Kannada NewsKarnataka NewsLatest

*ದತ್ತ ಪೀಠದಲ್ಲಿ ಮತ್ತೊಂದು ವಿವಾದ: ಹಿಂದೂ ಸಂಘಟನೆ ಮುಖಂಡರ ಆಕ್ರೋಶ*

ಪ್ರಗತಿವಾಹಿನಿ ಸುದ್ದಿ: ಚಿಕ್ಕಮಗಳೂರು ಜಿಲ್ಲೆಯ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ದತ್ತಪೀಠದಲ್ಲಿ ಮತ್ತೊಂದು ಹೊಸ ವಿವಾದ ಆರಂಭವಾಗಿದೆ.

ದತ್ತಪೀಠದ ಗುಹೆಯೊಳಗೆ ಜನವರಿ 23ರಂದು ‘ಕಲಮೆ ತಯ್ಯಬಾ’ ಎಂಬ ಹೊಸ ಆಚರಣೆ ನಡೆಸಲಾಗಿದೆ .ಇದು ಸುಪ್ರೀಂ ಕೋರ್ಟ್‌ನ ಆದೇಶಗಳನ್ನು ಉಲ್ಲಂಘಿಸುತ್ತದೆ ಎಂದು ಹಿಂದೂ ಸಂಘಟನೆ ಮುಖಂಡರು ಆರೋಪಿಸಿದ್ದಾರೆ.

ಹಿಂದೂಗಳಿಗೆ ಗುಹೆಯ ಮುಂಭಾಗ ಹೋಮ ಮಾಡಲು ಅವಕಾಶ ನೀಡದ ಜಿಲ್ಲಾಡಳಿತವು, ಹೊಸ ಆಚರಣೆಗೆ ಹೇಗೆ ಅವಕಾಶ ನೀಡಿದೆ ಎಂದು ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ. ರಂಗನಾಥ್ ಪ್ರಶ್ನಿಸಿದ್ದಾರೆ. ದತ್ತಪೀಠದ ವ್ಯವಸ್ಥಾಪನಾ ಸಮಿತಿಯ ಅವಧಿ ಮುಗಿದ ನಂತರ ಇಂತಹ ಬೆಳವಣಿಗೆಗಳು ನಡೆಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Home add -Advt

ಸುಪ್ರೀಂ ಕೋರ್ಟ್​​ನಲ್ಲಿ ದತ್ತಪೀಠದ ಪ್ರಕರಣ ಇರುವ ಕಾರಣ, ಯಾವುದೇ ಹೊಸ ಆಚರಣೆಗಳಿಗೆ ಅವಕಾಶವಿಲ್ಲ. ‘ಕಲಮೆ ತಯ್ಯಬಾ’ ಎಂಬ ಆಚರಣೆ ನಡೆಸಿರುವುದು ಕಾನೂನು ಬಾಹಿರ ಎಂದು ಕಿಡಿಕಾರಿದ್ದಾರೆ.

ಶಾಖಾದ್ರಿ ವಂಶಸ್ಥ ಸೈಯದ್ ಅಜ್ಮತ್ ಹೇಳುವ ಪ್ರಕಾರ ತಾವು ಯಾವುದೇ ಹೊಸ ಆಚರಣೆ ಮಾಡಿಲ್ಲ. ಜನವರಿ 25ರಂದು ಹಿಂದಿನ ಪದ್ಧತಿಯಂತೆ ದರ್ಶನ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಒಟ್ಟಾರೆಯಾಗಿ, ‘ಕಲಮೆ ತಯ್ಯಬಾ’ ಆಚರಣೆ ದತ್ತಪೀಠದಲ್ಲಿ ಮತ್ತೆ ವಿವಾದವನ್ನು ಸೃಷ್ಟಿಸಿದೆ.


Related Articles

Back to top button