Kannada NewsLatest

ಚಿಕ್ಕೋಡಿ; ಕುದುರೆ ಬಂಡಿ ರೇಸ್; ಇಬ್ಬರು ಯುವಕರಿಗೆ ಗಾಯ

ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ಚಿಕ್ಕೋಡಿಯ ಖಡಕಲಾಟ್ ಗ್ರಾಮದಲ್ಲಿ ಆಯೋಜಿಸಿದ್ದ ಕುದುರೆ ಬಂಡಿ ರೇಸ್ ನಲ್ಲಿ ಭಾರಿ ಅನಾಹುತವೊಂದು ಸ್ವಲ್ಪದರಲ್ಲಿಯೇ ತಪ್ಪಿದೆ.

ಗ್ರಾಮದಲ್ಲಿ ಕುದುರೆ ಬಂಡಿ ರೇಸ್ ನಡೆಯುತ್ತಿದ್ದ ವೇಳೆ ರೇಸ್ ನೋಡಲೆಂದು ಬಂದಿದ್ದ ಜನರ ಮೇಲೇಯೇ ಕುದುರೆ ಬಂಡಿ ಹರಿದಿದೆ. ಘಟನೆಯಲ್ಲಿ ಇಬ್ಬರು ಯುವಕರಿಗೆ ಗಂಭೀರ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಯ ಸಂಭವಿಸಿಲ್ಲ.

Home add -Advt

ರೇಸ್ ನಲ್ಲಿ ಓಡುತ್ತಿದ್ದ ಕುದುರೆಗಳು ಏಕಾಏಕಿ ಜನರ ಕಡೆ ನುಗ್ಗಿವೆ. ಜನರು ದಿಕ್ಕಾ ಪಾಲಾಗಿ ಓಡಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.  ಗಾಯಾಳು ಯುವಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮತ್ತೊಂದು ಭೀಕರ ಅಪಘಾತ; ನಾಲ್ವರು ವಿದ್ಯಾರ್ಥಿಗಳು ಸೇರಿ ಐವರ ದುರ್ಮರಣ

Related Articles

Back to top button