Kannada NewsLatest

ಬೆಳಗಾವಿ ನಗರದಲ್ಲಿ ಸಂಚಾರ ಮಾರ್ಗ ಬದಲಾವಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಗರದಲ್ಲಿ ಈದ್-ಇ-ಮಿಲಾದ್ ಹಬ್ಬದ ಮೆರವಣಿಗೆ ನಿಮಿತ್ತ ಅ.9ರಂದು ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.

 

ಮೆರವಣಿಗೆ  ಪಿಂಪಳಕಟ್ಟಾ ಹತ್ತಿರ ಪ್ರಾರಂಭವಾಗಿ ದೇಶಪಾಂಡೆ ಪಂಪ್, ಫೋರ್ಟ್  ರೋಡ್ ನೋ ಎಂಟ್ರಿ, ಮುಜಾವರ ಖೂಟ್, ಕೇಂದ್ರ ಬಸ್ ನಿಲ್ದಾಣ ಸರ್ಕಲ್, ಸಂಗೊಳ್ಳಿ ರಾಯಣ್ಣ ಸರ್ಕಲ್, ಡಿಸಿ ಆಫೀಸ್ ಗೇಟ್, ಚೆನ್ನಮ್ಮಾ ಸರ್ಕಲ್, ಕಾಲೇಜ ರೋಡ್, ಯಂಡೆ ಖೂಟ್, ಬೋಗಾರವೇಸ್ ಸರ್ಕಲ್, ಮಂಗಸೂಳಿ ಖೂಟ್, ಫಿಶ್ ಮಾರ್ಕೆಟ್, ಗ್ಲೋಬ್ ಸರ್ಕಲ್, ಕ್ಯಾಂಪದಲ್ಲಿರುವ ಅಸದಖಾನ ದರ್ಗಾದಲ್ಲಿ ಮುಕ್ತಾಯಗೊಳ್ಳಲಿದೆ.

ಸಾರ್ವಜನಿಕ ಸುಗಮ ಸಂಚಾರ ವ್ಯವಸ್ಥೆ ಹಿನ್ನೆಲೆಯಲ್ಲಿ ಬೆಳಗ್ಗೆ 8 ಗಂಟೆಯಿಂದ ಸಂಜೆ ಮೆರವಣಿಗೆ ಮುಕ್ತಾಯದವರೆಗೆ ಈ ಕೆಳಗಿನಂತೆ ವಾಹನಗಳ ಸಂಚಾರದಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದ್ದು ಪರ್ಯಾಯ ಮಾರ್ಗಗಳನ್ನು ಬಳಸಿಕೊಳ್ಳಲು  ಬೆಳಗಾವಿ ಪೊಲೀಸ್ ಆಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.

1) ಸಂಕೇಶ್ವರ,  ಚಿಕ್ಕೋಡಿ,  ಕೊಲ್ಲಾಪುರ ಕಡೆಯಿಂದ ಚನ್ನಮ್ಮ ಸರ್ಕಲ್ ಮೂಲಕ ಗೋವಾ ರಾಜ್ಯದ ಕಡೆಗೆ ಸಂಚರಿಸುವ ಎಲ್ಲ ಮಾದರಿಯ ವಾಹನಗಳ ಚಾಲಕ/ಸವಾರರು ಬಾಕ್ಸೈಟ್ ರೋಡ್ ಮೂಲಕ ಹಿಂಡಲಗಾ ಫಾರೆಸ್ಟ್ ನಾಕಾದಿಂದ ಎಡ ತಿರುವು ಪಡೆದು ಗಾಂಧಿ ಸರ್ಕಲ್ (ಅರಗನ ತಲಾಬ), ಶೌರ್ಯ ಚೌಕ (ಮಿಲ್ಟ್ರಿ ಆಸ್ಪತ್ರೆ ಸರ್ಕಲ್). ಕೇಂದ್ರೀಯ ವಿದ್ಯಾಲಯ ನಂ.2, ಶರ್ಕತ್ ಪಾರ್ಕ್, ಗವಳಿ ಗಲ್ಲಿ ಕ್ರಾಸ್, ಸೇಂಟ್ ಪಾಲ್ ಸ್ಕೂಲ್ ಹಿಂದಿನ ರಸ್ತೆ, ಮಿಲಿಟರಿ ಮಹಾದೇವ ಮಂದಿರ ಹತ್ತಿರ ಕಾಂಗ್ರೆಸ್ ರೋಡ್ ಮೂಲಕ ಖಾನಾಪುರ ರಸ್ತೆಗೆ ಸೇರಿ ಮುಂದೆ ಸಾಗುವುದು.

2) ಖಾನಾಪುರ ಕಡೆಯಿಂದ ರಾಷ್ಟ್ರೀಯ ಹೆದ್ದಾರಿಗೆ ಸೇರಿ ಸಂಕೇಶ್ವರ, ಚಿಕ್ಕೋಡಿ, ಕೊಲ್ಲಾಪುರ ಸಾಗುವ ಎಲ್ಲ ಮಾದರಿಯ ವಾಹನಗಳ ಚಾಲಕ/ಸವಾರರು 3ನೇ ರೇಲ್ವೆ ಗೇಟ್, ಕಾಂಗ್ರೆಸ್ ರಸ್ತೆ, ಮಿಲ್ಟ್ರಿ ಮಹಾದೇವ ಮಂದಿರದಿಂದ ಎಡತಿರುವ ಪಡೆದುಕೊಂಡು ಶರ್ಕತ್ ಪಾರ್ಕ್ ಕೇಂದ್ರಿಯ ವಿದ್ಯಾಲಯ ನಂ. 2, ಶೌರ್ಯ ಚೌಕ (ಮಿಲ್ಟ್ರಿ ಆಸ್ಪತ್ರೆ ಸರ್ಕಲ್). ಗಾಂಧಿ ಸರ್ಕಲ್ (ಅರಗನ ತಲಾಬ)ದಲ್ಲಿ ಎಡತಿರುವು ಪಡೆದುಕೊಂಡು ಗಣೇಶ ಮಂದಿರ ಹಿಂಡಲಗಾ ರಸ್ತೆ, ಡಂಬಲ್ ರೋಡ್ ಮೂಲಕ ಬಾಕ್ಸೈಟ್ ರಸ್ತೆಯ ಮೂಲಕ ರಾಷ್ಟ್ರೀಯ ಹೆದ್ದಾರಿ ಸೇರಿ ಮುಂದೆ ಸಾಗುವುದು.

3) ಖಾನಾಪುರ ಕಡೆಯಿಂದ ರಾಷ್ಟ್ರೀಯ ಹೆದ್ದಾರಿಗೆ ಸೇರಿ ಗೋಕಾಕ, ಯರಗಟ್ಟಿ, ಧಾರವಾಡ ಕಡೆಗೆ ಸಾಗುವ ಎಲ್ಲ ಮಾದರಿಯ ವಾಹನಗಳ ಚಾಲಕ/ಸವಾರರು 3ನೇ ರೇಲ್ವೆ ಗೇಟ್, ಅನಗೋಳ ನಾಕಾ, ಆರ್‌ಪಿಡಿ ಸರ್ಕಲ್, ಗೋವಾವೇಸ್ ಸರ್ಕಲ್ ನಿಂದ ಮಹಾತ್ಮಾ ಫುಲೆ ರಸ್ತೆಯ ಮುಖಾಂತರ ಬ್ಯಾಂಕ್ ಆಫ್ ಇಂಡಿಯಾ ಹೊಸ ರಸ್ತೆಯ ಮೂಲಕ ಹಳೆ ಪಿಬಿ ರೋಡ್ ಯಡಿಯೂರಪ್ಪ ಮಾರ್ಗವಾಗಿ ಅಲಾರವಾಡ ಬ್ರಿಡ್ಜ್ ಹತ್ತಿರ ರಾಷ್ಟ್ರೀಯ ಹೆದ್ದಾರಿ ಸೇರಿ ಮುಂದೆ ಸಾಗುವುದು.

4)  ಗೋಕಾಕ,  ಯರಗಟ್ಟಿ, ಧಾರವಾಡ ಕಡೆಯಿಂದ ಗೋವಾ ರಾಜ್ಯದ ಕಡೆಗೆ ಸಂಚರಿಸುವ  ಎಲ್ಲ ಮಾದರಿಯ ವಾಹನಗಳ ಚಾಲಕ/ಸವಾರರು ಅಲಾರವಾಡ ಅಂಡರ್ ಬ್ರಿಡ್ಜ್ ಮೂಲಕ ತಿರುವು ಪಡೆದು ಹಳೆ ಪಿಬಿ ರೋಡ್ ಮೂಲಕ ಹೊಸೂರ ಪಿಂಪಳಕಟ್ಟಾ ಮುಂದೆ ಎಡ ತಿರುವು ಪಡೆದುಕೊಂಡು ಬ್ಯಾಂಕ್ ಆಫ್ ಇಂಡಿಯಾ ಡಬಲ್ ರೋಡ್ ಮೂಲಕ ಗೋವಾವೆಸ್ ಸರ್ಕಲ್ ನಿಂದ  ಮುಂದೆ ಸಾಗುವುದು.

ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ವೀರಯೋಧ ಶಿವಾನಂದ ಬಾಬು ಸಿರಗಾಂವಿ ಅಂತ್ಯಕ್ರಿಯೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button