*ಮೆಗಾ ಪವರ್ ಕಟ್*: *8 ಗಂಟೆಗೂ ಹೆಚ್ಚು ಕಾಲ ವಿದ್ಯುತ್ ವ್ಯತ್ಯಯ*: *ಎಲ್ಲೆಲ್ಲಿ?*

ಪ್ರಗತಿವಾಹಿನಿ ಸುದ್ದಿ: ಇತ್ತೀಚಿನ ದಿನಗಳಲ್ಲಿ ರಾಜ್ಯ ರಾಜಧಾನಿ ಬೆಂಗಳೂರು ಮಾತ್ರವಲ್ಲ ರಾಜ್ಯದ ವಿವಿಧೆಡೆಗಳಲ್ಲಿ ನಿರಂತರವಾಗಿ ಲೋಡ್ ಶೆಡ್ದಿಂಗ್, ವಿದ್ಯುತ್ ವ್ಯತ್ಯಯಗಳು ಹೆಚ್ಚುತ್ತಿವೆ. ಕಾಮಗಾರಿ ಹೆಸರಲ್ಲಿ ಹಾಗೂ ಇನ್ನಿತರೆ ಕಾರಣಗಳಿಂದಾಗಿ ಪವರ್ ಕಟ್ ಮಾಡಲಾಗುತ್ತಿದೆ.
ಇಂದು ರಾಜ್ಯದ ಕೆಲವೆಡೆಗಳಲ್ಲಿ ನಿರಂತರ ಎಂಟು ಗಂಟೆಗೂ ಹೆಚ್ಚು ಕಾಲ ವಿದ್ಯುತ್ ವ್ಯತ್ಯಯವಾಗಲಿದೆ. ಈ ಬಗ್ಗೆ ವಿದ್ಯುತ್ ಸರಬರಾಜು ನಿಗಮಗಳು ಮುಂಚಿತವಗೈಯೇ ಸರವಜನಿಕರಿಗೆ ಮಾಹಿತಿ ನೀಡಿವೆ.
ಮಂಡ್ಯ ತಾಲೂಕಿನ ಕೋಲಕಾರನದೊಡ್ಡಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ಕಾಮಗಾರಿ ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ ಇಂದು ಹಲವು ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಬೆಳಿಗ್ಗೆ 10 ಗಂಟೆಯಿಂದ ಸಂಜೆ 6.30ರವರೆಗೆ ವಿದ್ಯುತ್ ಕಡಿತವಾಗಲಿದ್ದು, ಟಿ. ಮಲ್ಲಿಗೆರೆ, ತಗ್ಗಹಳ್ಳಿ, ಹಳುವಾಡಿ, ಪುರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳಿಗೆ ಸಮಸ್ಯೆಗುವ ಸಾಧ್ಯತೆ ಇದೆ.
ಕೋಲಕಾರನದೊಡ್ಡಿಯ 66/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್-07 ಪುರ ಎನ್ಜೆವೈ (NJY) ವಿದ್ಯುತ್ ಮಾರ್ಗದಲ್ಲಿ ತುರ್ತು ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಿಗದಿತ ಅವಧಿಯಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ಕೊತ್ತತ್ತಿ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕರು, ವ್ಯಾಪಾರಸ್ಥರು ಹಾಗೂ ವಿದ್ಯುತ್ ಅವಲಂಬಿತ ಕೆಲಸ ಮಾಡುವವರು ಅಗತ್ಯ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ. ಕಾಮಗಾರಿಯನ್ನು ಸುಗಮವಾಗಿ ಕೈಗೊಳ್ಳಲು ಸಾರ್ವಜನಿಕರು ಸಹಕರಿಸುವಂತೆ ಚೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ:
ಟಿ. ಮಲ್ಲಿಗೆರೆ
ತಗ್ಗಹಳ್ಳಿ
ಹಳುವಾಡಿ
ಕಮ್ಮನಾಯಕನಹಳ್ಳಿ
ಪುರ
ಮಾರಸಿಂಗನಹಳ್ಳಿ
ತಿಮ್ಮನಹೊಸೂರು
ಲೋಕಸರ
ಮಂಗಲ
ಹೆಬ್ಬಾಕವಾಡಿ
ಸಂತೆಕಸಲಗೆರೆ
ಹನಿಯಂಬಾಡಿ
ಚೀರನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 6.30ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಸಾರ್ವಜನಿಕರು, ವ್ಯಾಪಾರಸ್ಥರು ಹಾಗೂ ವಿದ್ಯುತ್ ಅವಲಂಬಿತ ಕೆಲಸ ಮಾಡುವವರು ಅಗತ್ಯ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ. ಕಾಮಗಾರಿಯನ್ನು ಸುಗಮವಾಗಿ ಕೈಗೊಳ್ಳಲು ಸಾರ್ವಜನಿಕರು ಸಹಕರಿಸುವಂತೆ ಚೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




