Belagavi NewsBelgaum NewsKannada NewsKarnataka News

*ಇಲ್ಲಿ ಮಕ್ಕಳ ಸಂಜ್ಞೆಯೇ ಸವಿನುಡಿ; ಬಾಪೂವಿಗೆ ಗೌರವ ನುಡಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಹಾತ್ಮಾ ಗಾಂಧೀಜಿಯವರ 155 ನೇ ಜಯಂತಿಯನ್ನು ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಯಿತು. ಆದರೆ ಇಲ್ಲಿ ಸರಕಾರಿ ಕಿವುಡ ಮಕ್ಕಳ ಶಾಲೆಯಲ್ಲಿ ನಡೆದ ಜಯಂತಿ ಕಾರ್ಯಕ್ರಮ ಸಂಪೂರ್ಣ ವಿಭಿನ್ನವಾಗಿತ್ತು.

ಮಾತು ಬಾರದ ಹಾಗೂ ಕಿವಿ ಕೇಳದ ಮಕ್ಕಳೇ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರಿಗೆ ಸಂಜ್ಞೆಯ ಸವಿನುಡಿ ಮೂಲಕ ಸ್ಮರಿಸಿದರು.

ಒಂದರಿಂದ ಹತ್ತನೇ ತರಗತಿಯ ಮಕ್ಕಳನ್ನು ಹೊಂದಿರುವ ಇಲ್ಲಿನ ಆಝಮ್ ನಗರ‌ ಬಳಿಯ ವಿದ್ಯಾಗಿರಿಯಲ್ಲಿರುವ ಸರಕಾರಿ ಕಿವುಡ ಮಕ್ಕಳ ಶಾಲೆಯಲ್ಲಿ ಬುಧವಾರ(ಆ.2) ಗಾಂಧೀಜಿ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ವಿದ್ಯಾರ್ಥಿಗಳೇ ಸಂಪೂರ್ಣ ಕಾರ್ಯಕ್ರಮವನ್ನು ನಿರ್ವಹಿಸಿದರು. ಸಂಜ್ಞೆಯ ಮೂಲಕವೇ ಭಾಷಣ ಮಾಡಿದರು. ಭಾಷಣ ಮಾತ್ರವಲ್ಲ. ನಿರೂಪಣೆ, ಸ್ವಾಗತ, ಮಾಲಾರ್ಪಣೆ, ವಂದನಾರ್ಪಣೆ ಎಲ್ಲವೂ ವಿದ್ಯಾರ್ಥಿನಿಯರದ್ದೇ ಆಗಿತ್ತು. ಶಿಕ್ಷಕರು ಬರೀ ಪ್ರೇಕ್ಷಕರಾಗಿದ್ದರು.

ಮೊದಲಿಗೆ ಶ್ರಮದಾನದ ಮಾಡಿದ ಮೇಲೆ ಶಿಕ್ಷಕಿ ರತ್ನಮ್ಮ ಪಿ ಅವರ ಮಾರ್ಗದರ್ಶನ ದಲ್ಲಿ ಕುಮಾರಿ ರೂಪಾಲಿ ಮಹಾಂಕಾಳೆ ಮತ್ತು ಕುಮಾರಿ ಸರಸ್ವತಿ ಭಟ್ಟಿ ಮಹಾತ್ಮರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿರು.
ನಂತರ ಎಲ್ಲ ಮಕ್ಕಳು ಶಿಕ್ಷಕರಿಗೆ ಮತ್ತು ಸಿಬ್ಬಂದಿಯನ್ನು ಸ್ವಾಗತಿಸಿದರು. ಒಂಭತ್ತನೆಯ ತರಗತಿಯ ವಿಧ್ಯಾರ್ಥಿನಿಯರಾದ ಕುಮಾರಿ ಸರಸ್ವತಿ ಮತ್ತು ಐಶು ವಡ್ಡರ ಸಂಜ್ಞಾ ಭಾಷೆಯಲ್ಲಿ ಭಾಷಣ ಮಾಡಿದ್ದು, ವಿಶೇಷವಾಗಿತ್ತು.

ಹತ್ತನೆ ತರಗತಿ ವಿದ್ಯಾರ್ಥಿನಿ ಕುಮಾರಿ ರೂಪಾಲಿ ಮಹಾಂಕಾಳೆ ಕಾರ್ಯಕ್ರಮ ನಿರೂಪಿಸಿದರು. ಪ್ರಜ್ಞಾ ನಾಯಕ ವಂದಿಸಿದರು. ಶಾಲೆಯ ಅಧೀಕ್ಷಕರಾದ ಮಂದಾಕಿನಿ ವಂಡಕರ, ಶಿಕ್ಷಕರಾದ ಸವಿತಾ ಹೊಳಿ, ವಾಸಂತಿ ಶಿಂಗೆ, ಸೂರ್ಯಕಾಂತ ಹೂಗಾರ, ಶಿಕ್ಷಕೇತರ ಸಿಬ್ಬಂದಿಯಾದ ಗಾಯತ್ರಿ ಕಡಬೂರ, ಯಲ್ಲವ್ವ ಭೂಸಗೊನ್ನ ಮತ್ತಿತರರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button