ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಎನ್ ಎಸ್ ಇ (ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್) ಮಾಜಿ ಸಿಇಒ ಚಿತ್ರ ರಾಮಕೃಷ್ಣ ಅವರನ್ನು ಸಿಬಿಐ ಬಂಧಿಸಿದೆ.
ಬಂಧನ ಭೀತಿಯಲ್ಲಿದ್ದ ಚಿತ್ರಾ ರಾಮಕೃಷ್ಣ ಅವರ ನಿರೀಕ್ಷಣಾ ಜಾಮೀನು ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಸಿಬಿಐ ಚಿತ್ರಾ ಅವರನ್ನು ಬಂಧಿಸಿದೆ.
2013ರಿಂದ 2016ರವರೆಗೆ ಎನ್ ಎಸ್ ಇ ಸಿಇಒ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದ ಚಿತ್ರ, ಹಿಮಾಲಯದಲ್ಲಿರುವ ಓರ್ವ ಯೋಗಿಯವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಎನ್ ಎಸ್ ಇಗೆ ಸಂಬಂಧಿಸಿದ ಹಲವು ಗೌಪ್ಯ ವಿಚಾರಗಳನ್ನು ಹಂಚಿಕೊಂಡಿದ್ದರು. ಅಪರಿಚಿತ ಯೋಗಿ ಆದೇಶದಂತೆಯೇ ಆನಂದ್ ಸುಬ್ರಹ್ಮಣಿಯನ್ ಅವರನ್ನು ಎನ್ ಎಸ್ ಇಗೆ ನೇಮಕ ಮಾಡಿಕೊಂಡಿದ್ದರು ಎನ್ನಲಾಗಿದೆ.
ಆದರೆ ಹಿಮಾಲಯದ ನಿಗೂಢ ಯೋಗಿ, ಬೇರೆ ಯಾರೂ ಅಲ್ಲ, ಆನಂದ್ ಸುಬ್ರಹ್ಮಣಿಯವರೇ ಯೋಗಿ ಆಗಿರಬಹುದು ಎಂಬುದು ಸಿಬಿಐ ಅನುಮಾನವಾಗಿದೆ. ಈಗಾಗಲೇ ಸಿಬಿಐ ಆನಂದ್ ಅವರನ್ನು ಬಂಧಿಸಿ ವಿಚಾರಣೆ ನಡೆಸಿದ್ದು, ಇದೀಗ ಚಿತ್ರ ರಾಮಕೃಷ್ಣ ಅವರನ್ನು ಬಂಧಿಸಿದೆ.
ಚಿತ್ರಾ ವಿರುದ್ಧ ಅವರ ಆಡಳಿತ ಅವಧಿಯಲ್ಲಿ ನಡೆದ ಕೋ ಲೊಕೇಶನ್ ಎಂಬ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಬಿಐ ತನಿಖೆ ಕೈಗೊಂಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ