*ಎಲ್ಲೆಂದರಲ್ಲಿ ಗುಟ್ಕಾ, ತಂಬಾಕು ಹಾಕುವುದು, ಸಿಗರೇಟ್ ಸೇದುವವರೆ ಹುಷಾರ್: ರಾಜ್ಯದಲ್ಲಿ ಜಾರಿಯಾಗಿದೆ ಹೊಸ ನಿಯಮ!*

ಪ್ರಗತಿವಾಹಿನಿ ಸುದ್ದಿ: ಇನ್ಮುಂದೆ ಗುಟ್ಕಾ, ತಂಬಾಕು ಹಾಕಿ ಎಲ್ಲೆಂದರಲ್ಲಿ ಉಗುಳುವವರು, ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇದುವವರೇ ಹುಷಾರ್. ರಾಜ್ಯದಲ್ಲಿ ಕಟ್ಟುನಿಟ್ಟಿನ ಕಾಯ್ದೆ ಜಾರಿಯಾಗಿದ್ದು, ನಿಯಮ ಉಲ್ಲಂಘಿಸಿದರೆ ಭಾರಿ ದಂಡ ತೆರಬೇಕಾಗುತ್ತದೆ.
ಸರವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇದುವುದು, ಗುಟ್ಕಾ, ತಂಬಾಕುಗಳನ್ನು ಹಾಕಿ ಉಗುಳಿದರೆ ಇನ್ಮುಂದೆ 1000 ರೂಪಾಯಿ ದಂಡ ಪಾವತಿಸಬೇಕಾಗುತ್ತದೆ. ಈ ಬಗ್ಗೆ ರಾಜ್ಯ ಸರ್ಕಾರ ಅಧಿಕ್ಋತ ಅಧಿಸೂಚನೆ ಹೊರಡಿಸಿದ್ದು, ಕಾಯ್ದೆ ಜಾರಿಗೆ ತಂದಿದೆ.
21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಗುಟ್ಕಾ, ತಂಬಾಕು ಉತ್ಪನ್ನ, ಸಿಗರೇಟ್ ಮಾರಾಟ ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸಿದರೆ 1000 ರೂ ದಂಡ ಕಟ್ಟಬೇಕಾಗುತ್ತದೆ. ಮಾತ್ರವಲ್ಲ ಪಬ್ ಬಾರ್, ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಹುಕ್ಕಾ ನಿಷೇಧ ಮಾಡಲಾಗಿದೆ. ಕಾನೂನು ಉಲ್ಲಂಘನೆ ಮಾಡಿದರೆ 50,000 ರೂಪಾಯಿಯಿಂದ 1 ಲಕ್ಷದವರೆಗೆ ದಂಡ ಮತ್ತು ಒಂದು ವರ್ಷದಿಂದ ಮೂರು ವರ್ಷದ ವರೆಗೆ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಆದೇಶ ಹೊರಡಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




