Kannada NewsKarnataka News

ಸ್ವಚ್ಛತೆ ಮತ್ತು ಪ್ಲ್ಯಾಸ್ಟಿಕ್ ಮುಕ್ತ ಅಭಿಯಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –ಗಾಂಧಿ ಜಯಂತಿ ಅಂಗವಾಗಿ ಬೆಳಗಾವಿಯ ವಾರ್ಡ ನಂ.40ರಲ್ಲಿ ಬುಧವಾರ ಸ್ವಚ್ಛತೆ ಮತ್ತು ಪ್ಲ್ಯಾಸ್ಟಿಕ್ ಮುಕ್ತ ಅಭಿಯಾನ ನಡೆಯಿತು.

ವಾರ್ಡ್ ನ ಮಾಜಿ ನಗರ ಸೇವಕಿ ಅನುಶ್ರೀ ದೇಶಪಾಂಡೆ ಅಭಿಯಾನಕ್ಕೆ ಚಾಲನೆ ನೀಡಿದರು. ವಾರ್ಡನ್ನು ಸ್ವಚ್ಛವಾಗಿಟ್ಟುಕೊಳ್ಳಲು ಮತ್ತು ಪ್ಲ್ಯಾಸ್ಟಿಕ್ ನಿರ್ಮೂಲನೆ ಮಾಡಲು ಜನರು ಸಹಕಾರ ನೀಡಬೇಕು. ಅಭಿಯಾನದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕು ಎಂದು ಅವರು ವಿನಂತಿಸಿದರು.

Home add -Advt

ಎಲ್ಲೆಂದರಲ್ಲಿ ಕಸ ಚೆಲ್ಲುವ ರೂಢಿಯನ್ನು ಬಿಡಬೇಕು. ನಮ್ಮ ಪರಿಸರವನ್ನು ನಾವೇ ಸ್ವಚ್ಛವಾಗಿಟ್ಟುಕ1ೊಳ್ಳಬೇಕು. ಬೇರೆಯವರು ಬಂದು ಸ್ವಚ್ಚ ಮಾಡಲಿ ಎನ್ನುವ ಮನೋಭಾವ ಬಿಡಬೇಕು ಎಂದೂ ಅವರು ಹೇಳಿದರು.

ವಾರ್ಡ್ 40ನ್ನು ಬೆಳಗಾವಿಯಲ್ಲಿಯೇ ಮಾದರಿಯಾಗಿ ಮಾಡಬೇಕಿದೆ. ಇಲ್ಲಿನ ಜನರು ಸುಶಿಕ್ಷಿತರಿದ್ದು, ಅಭಿಯಾನವನ್ನು ಯಶಸ್ವಿಗೊಳಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಅನುಶ್ರೀ ಹೇಳಿದರು.

ಪಾಲಿಕೆಯ ಆರೋಗ್ಯ ವಿಭಾಗದ ನಾಡಗೌಡ ಸೇರಿದಂತೆ ಪಾಲಿಕೆ ಸಿಬ್ಬಂದಿ, ಪೌರ ಕಾರ್ಮಿಕರು, ಸ್ಥಳೀಯ ನಾಗರಿಕರು ಭಾಗವಹಿಸಿದ್ದರು.

Related Articles

Back to top button