Latest

ರಾಜೀನಾಮೆ ವಿಚಾರ; ಸ್ಪಷ್ಟನೆ ನೀಡಿದ ಸಿಎಂ ಬಿಎಸ್ ವೈ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಹೈಕಮಾಂಡ್ ಸೂಚಿಸುವವರೆಗೂ ಸಿಎಂ ಆಗಿರುತ್ತೇನೆ. ಇನ್ನೂ ನನಗೆ ಕೇಂದ್ರದ ನಾಯಕರು ಯಾವುದೇ ಸಂದೇಶ ನೀಡಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ

ವಿಧಾನಸೌಧದಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ಹೈಕಮಾಂಡ್ ಬೇಡ ಎಂದರೆ ಈಗಲೇ ರಾಜೀನಾಮೆ ನೀಡಲು ಸಿದ್ಧ ಈ ಬಗ್ಗೆ ನಾನು 2 ತಿಂಗಳ ಹಿಂದೆಯೇ ಹೇಳಿದ್ದೇನೆ. ಜುಲೈ 25ರಂದು ವರಿಷ್ಠರು ಸಂದೇಶ ನೀಡಬಹುದು. ಅವರ ಸೂಚನೆಗಾಗಿ ಕಾಯುತ್ತಿದ್ದೇನೆ. ಪ್ರಧಾನಿ ಮೋದಿ, ಶಾ, ನಡ್ಡಾ ಏನು ಸಲಹೆ ನೀಡುತ್ತಾರೆ ಅವರ ಸೂಚನೆ ಪಾಲಿಸಲು ಸಿದ್ಧ. ಸಿಎಂ ಸ್ಥಾನಕ್ಕಾಗಿ ಯಾರ ಹೆಸರನ್ನೂ ನಾನು ಸೂಚಿಸಲ್ಲ. ನನ್ನ ಬಳಿ ಅಭಿಪ್ರಾಯ ಕೇಳಿದರೂ ನಾನು ಯಾರ ಹೆಸರನ್ನೂ ಪ್ರಸ್ತಾಪಿಸುವುದಿಲ್ಲ ಎಂದು ಹೇಳಿದರು.

ರಾಜೀನಾಮೆ ಬಗ್ಗೆ ಹೈಕಮಾಂಡ್ ನಿಂದ ನನಗೆ ಇನ್ನೂ ಯಾವುದೇ ಸೂಚನೆ ಬಂದಿಲ್ಲ. ಹಾಗಾಗಿ ಈಗಲೇ ಯಾವುದೇ ತೀರ್ಮಾನಕ್ಕೆ ಬರುವುದು ಬೇಡ. ಜುಲೈ 25ರ ಬಳಿಕ ಸಂದೇಶ ನೀಡುವ ಸಾಧ್ಯತೆ ಇದೆ. ವರಿಷ್ಠರು ನೀಡುವ ಸೂಚನೆಗೆ ನಾನು ಬದ್ಧ. ಅಧಿಕಾರ ಇರಲಿ ಇಲ್ಲದಿರಲಿ ಪಕ್ಷ ಸಂಘಟನೆ ನಿಟ್ಟಿನಲ್ಲಿ ದುಡಿದು, ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವುದೇ ನನ್ನ ಗುರಿಯಾಗಿದೆ ಎಂದು ಸ್ಪಷ್ಟಪಡಿಸಿದರು.
ಸಿಎಂ ಯಡಿಯೂರಪ್ಪ ಪರ ಕಿತ್ತೂರಲ್ಲಿ ಮಠಾಧೀಶರ ಸಭೆ
ಕೆ.ಎಸ್.ಈಶ್ವರಪ್ಪಗೆ ಸಿಎಂ ಸ್ಥಾನ ನೀಡಿ; ಇಲ್ಲವಾದಲ್ಲಿ ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button