Latest

ಯಡಿಯೂರಪ್ಪನವರನ್ನು ಕೆಳಗಿಳಿಸಿ ಬೇರೆ ಲಿಂಗಾಯಿತರನ್ನು ಕೂರಿಸಬೇಕು; ಜಯಮೃತ್ಯುಂಜಯ ಸ್ವಾಮೀಜಿ ವಾಗ್ದಾಳಿ

ಪ್ರಗತಿವಾಹಿನಿ ಸುದ್ದಿ; ಚಿತ್ರದುರ್ಗ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕೇಂದ್ರ ಸರ್ಕಾರದ ನಿರ್ಧಾರ ಎಂಬ ಸಿಎಂ ಬಿ.ಎಸ್.ಯಡಿಯೂರಪ್ಪನವರ ಹೇಳಿಕೆಗೆ ಕಿಡಿಕಾರಿರುವ ಜಯಮೃತ್ಯುಂಜಯ ಸ್ವಾಮೀಜಿ ಯಡಿಯೂರಪ್ಪನವರಿಗೆ ಬುದ್ಧಿ ಸ್ಥಿಮಿತದಲಿಲ್ಲ, ಅವರಿಗೆ ವಯಸ್ಸಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ, ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಬಗ್ಗೆ ಯಡಿಯೂರಪ್ಪ, ನಿನ್ನೆ ಸರ್ಕಾರದ ನಿಯೋಗ ಕಳುಹಿಸಿ ಭರವಸೆ ನೀದಿದರು. ಇಂದು ವಿಧಾನಸಭೆಯಲ್ಲಿ ಮೀಸಲಾತಿ ಬಗ್ಗೆ ಕೇಂದ್ರದತ್ತ ಬೆರಳು ತೋರುತ್ತಿದ್ದಾರೆ. ಹೀಗಾಗಿ ಬಿಎಸ್ ವೈ ಅವರಿಗೆ ಬುದ್ಧಿ ಸ್ಥಿಮಿತದಲ್ಲಿಲ್ಲ, ವಯಸ್ಸಾಗಿದೆ. ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ಬೇರೆ ಲಿಂಗಾಯಿತರನ್ನು ಕೂರಿಸಬೇಕು ಎಂದು ಹೇಳಿದರು.

Home add -Advt

ಮೀಸಲಾತಿ ಬಗ್ಗೆ ಕೇಂದ್ರ ಸರ್ಕಾರದತ್ತ ಬೆರಳು ತೋರುತ್ತ ಯಡಿಯೂರಪ್ಪ ಈಗ ಹೈಕಾಂಡ್ ನ್ನು ಎತ್ತಿಕಟ್ಟುವ ಕೆಲಸ ಮಾಡಲು ಹೊರಟಂತಿದೆ. ಈ ಬಗ್ಗೆ ವರಿಷ್ಠರೂ ಕೂಡ ವಿಚಾರ ಮಾಡಲಿ. ರಾಜ್ಯದಲ್ಲಿನ ಸಮುದಾಯಗಳಿಗೆ ಮೀಸಲಾತಿ ನಿಡುವ ಅಧಿಕಾರ ರಾಜ್ಯ ಸರ್ಕಾರಗಳಿಗಿದೆಯೇ ಹೊರತು ಕೇಂದ್ರದ ಪಾತ್ರವಿರುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ವಿಧಾನಸಭೆಯಲ್ಲಿ ಇಂದು ಮಾತನಾಡಿದ ಯಡಿಯೂರಪ್ಪ, ಪಂಚಮಸಾಲಿ ಮೀಸಲಾತಿ ನನ್ನ ಕೈಯಲ್ಲಿಲ್ಲ. ನಮ್ಮದು ರಾಷ್ಟ್ರೀಯ ಪಕ್ಷ. ಏನಿದ್ದರೂ ಕೇಂದ್ರ ಸರಕಾರ ಕ್ರಮ ತೆಗೆದುಕೊಳ್ಳಬೇಕು. ನನ್ನಿಂದ ಏನೂ ಸಾಧ್ಯವಿಲ್ಲ ಎಂದು ಹೇಳಿದ್ದರು.

 

Related Articles

Back to top button