Film & EntertainmentKannada NewsKarnataka NewsLatest
ಮಲಪ್ರಭಾ, ಮಹದಾಯಿಗೆ ಜೀವಕಳೆ
ಪ್ರಗತಿವಾಹಿನಿ ಸುದ್ದಿ, ಖಾನಾಪುರ:
ಖಾನಾಪುರ ತಾಲ್ಲೂಕಿನ ಕಣಕುಂಬಿ ಸುತ್ತಮುತ್ತ ಕಳೆದ ಎರಡು ದಿನದಿಂದ ಉತ್ತಮ ವರ್ಷಧಾರೆಯಾಗುತ್ತಿದೆ.
ಶನಿವಾರ ಇಡೀ ದಿನ ಮತ್ತು ರಾತ್ರಿ ಪೂರ್ತಿ ಬಿಡದೇ ಮಳೆ ಸುರಿದಿದೆ. ಕಣಕುಂಬಿ ಅರಣ್ಯದಲ್ಲಿ 18 ಸೆಂ.ಮೀ ಮಳೆ ದಾಖಲಾಗಿದೆ.
ಸತತ ಧಾರೆಯಿಂದಾಗಿ ಜೀವಕಳೆ ತುಂಬಿಕೊಂಡು ಮೈದುಂಬಿ ಹರಿಯುತ್ತಿರುವ ಮಲಪ್ರಭೆ, ಮಹದಾಯಿ ನದಿಗಳು. ವರುಣನ ಆರ್ಭಟದಿಂದ ಕಾನನದಂಚಿನ ಕೆಲ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತ.
ಚುರುಕು ಪಡೆದುಕೊಂಡ ಕೃಷಿ ಚಟುವಟಿಕೆಗಳು. ಹಬ್ಬನಹಟ್ಟಿ ಆಂಜನೇಯ ದೇವಾಲಯ ಮಲಪ್ರಭಾ ನದಿಯಲ್ಲಿ ಜಲಾವೃತವಾಗಿದೆ.




