Latest

ನಾನು ಸಿಎಂ ಆಗಲು, ರಾಜಕೀಯವಾಗಿ ಬೆಳೆಯಲು ಬಿಎಸ್ ವೈ ಕಾರಣ; ರಾಜಾಹುಲಿಯನ್ನು ಹಾಡಿ ಹೊಗಳಿದ ಸಿಎಂ

ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: ನಾನು ರಾಜೀಯವಾಗಿ ಬೆಳೆಯಲು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕಾರಣ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನಲ್ಲಿ ಮಾತನಾದಿದ ಸಿಎಂ ಬೊಮ್ಮಾಯಿ, ಬಿ.ಎಸ್.ಯಡಿಯೂರಪ್ಪ ದೂರದೃಷ್ಟಿ ಇರುವಂತಹ ನಾಯಕ. ಬಡವರ ಬಗ್ಗೆ ಅಪಾರವಾದ ಕಳಕಳಿ ಇರುವಂತಹ ವ್ಯಕ್ತಿ. ರಾಜ್ಯದ ಮೂಲೆ ಮೂಲೆಯಲ್ಲಿಯೂ ಯಡಿಯೂರಪ್ಪ ಸೇವೆ ಸಲ್ಲಿಸಿದ್ದಾರೆ ಎಂದು ಗುಣಗಾನ ಮಾಡಿದರು.

Home add -Advt

ನಾನು ರಾಜಕೀಯವಾಗಿ ಬೆಳೆಯಲು, ಸಿಎಂ ಆಗಲು ಬಿ ಎಸ್ ವೈ ಕಾರಣ. ಸಿಎಂ ಸ್ಥಾನ ಬಿಟ್ಟಾಗ ಯಡಿಯೂರಪ್ಪ ಅವರಿಗೆ ಎಲ್ಲಿಯೂ ಕಹಿ ಭಾವ ಇರಲಿಲ್ಲ. ನಾನಿಂದು ಸಿಎಂ ಸ್ಥಾನದಲ್ಲಿರಲು ಯಡಿಯೂರಪ್ಪ ಅವರ ಆಶಿರ್ವಾದವೇ ಪ್ರಮುಖ ಕಾರಣ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ನಾನು ಬದ್ಧನಾಗಿದ್ದೇನೆ ಎಂದು ಹೇಳಿದರು.

ಅಂತರಾಜ್ಯ ಜಲವಿವಾದ ಕಾಯ್ದೆಗೆ ತಿದ್ದುಪಡಿ ಅಗತ್ಯ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Related Articles

Back to top button