Latest

ಹೆಚ್ಚಳವಾಯ್ತು ಪ್ರಧಾನಿ ಮೋದಿ ಸಂಪತ್ತು

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಆಸ್ತಿ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿದ್ದು, ಈ ಕುರಿತು ಪ್ರಧಾನಿ ಕಾರ್ಯಾಲಯದಿಂದ ಮಾಹಿತಿ ಸಿಕ್ಕಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಧಾನಿ ಮೋದಿ ಅವರ ಆಸ್ತಿಯಲ್ಲಿ 36 ಲಕ್ಷ ಹೆಚ್ಚಾಗಿದೆ. ಗೃಹ ಸಚಿವ ಅಮಿತ್‌ ಶಾ ನಿವ್ವಳ ಮೌಲ್ಯದಲ್ಲಿ ಇಳಿಕೆ ಕಂಡಿದೆ. ಷೇರು ಮಾರುಕಟ್ಟೆಯಲ್ಲಿನ ಏರಿಳಿತದಿಂದಾಗಿ ಸಂಪತ್ತಿನಲ್ಲಿ ಅಮಿತ್‌ ಷಾ ಅವರಿಗೆ ನಷ್ಟ ಉಂಟಾಗಿದೆ.

Home add -Advt

ಜೂನ್‌ಗೆ ಪ್ರಧಾನಿ ಮೋದಿ ಬಳಿ ಒಟ್ಟು 2.85 ಕೋಟಿಯ ಒಟ್ಟು ವಾರ್ಷಿಕ ನಿವ್ವಳ ಮೌಲ್ಯ ಇದೆ ಎಂದು ಅವರು ಪ್ರಧಾನಿ ಕಾರ್ಯಾಲಯಕ್ಕೆ ನೀಡಿರುವ ಆಸ್ತಿಯ ಮಾಹಿತಿಯಲ್ಲಿ ಘೋಷಿಸಿದ್ದಾರೆ. ಕಳೆದ ವರ್ಷ 2.49 ಕೋಟಿ ಇತ್ತು. ಅಂದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 36 ಲಕ್ಷ ಹೆಚ್ಚಾಗಿದೆ.

ಬ್ಯಾಂಕಿನಲ್ಲಿ ಜಮಾವಣೆಯಾಗಿರುವ ಹಣದಿಂದಾಗಿ ಪ್ರಧಾನಿ ಮೋದಿ ಅವರಿಗೆ ಒಟ್ಟು 3.3 ಲಕ್ಷ ಹಣ ಬಡ್ಡಿಯ ರೂಪದಲ್ಲಿ ಸಿಕ್ಕಿದೆ. ಅಲ್ಲದೇ ವಿವಿಧ ಹೂಡಿಕೆಗಳಿಂದಾಗಿ 33 ಲಕ್ಷ ಹಣ ಪ್ರಧಾನಿ ಮೋದಿ ಪಾಲಾಗಿದೆ. ಹೀಗಾಗಿ 3.3 ಲಕ್ಷ ಹಾಗೂ 33 ಲಕ್ಷ ಒಟ್ಟು ಸೇರಿ 36.3 ಲಕ್ಷ ಹಣ ಏರಿಕೆಯಾಗಿದೆ.

Related Articles

Back to top button