ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಿಜೆಪಿ ಸರ್ಕಾರದ ಟೆಂಡರ್ ಗೋಲ್ ಮಾಲ್ ಬಗ್ಗೆ ಆರೋಪಿಸಿದ್ದ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಮೊದಲು ಅವರು ಜೈಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.
ಅಧಿಕಾರಕ್ಕೆ ಬಂದರೆ ಬಿಜೆಪಿ ನಾಯಕರನ್ನು ಜೈಲಿಗೆ ಕಳುಹಿಸುವುದಾಗಿ ಕೈ ನಾಯಕರ ಹೇಳಿಕೆ ವಿಚಾರವಾಗಿ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಕಾಂಗ್ರೆಸ್ ನಾಯಕರು ಮೊದಲು ತಾವು ಜೈಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳಲಿ, ಜಾಮೀನು ಪಡೆದು ರಕ್ಷಣೆ ಪಡೆದುಕೊಳ್ಳಲಿ ಎಂದು ಹೇಳಿದ್ದಾರೆ.
ಕಳೆದ ಚುನಾವಣೆಯಲ್ಲಿ ಅವರು ಮಾಡಿದ್ದ ಕರ್ಮಕಾಂಡವನ್ನು ಅವರು ನೆನಪಿಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸುಲಿಗೆ ಮಾಡುವುದು ಸ್ಪಷ್ಟ ಎಂಬುದು ಅವರ ಹೇಳಿಕೆಯಿಂದಲೇ ಗೊತ್ತಾಗುತ್ತಿದೆ. ಅವರ ಅಜೆಂಡಾ ಸ್ಪಷ್ಟವಾಗುತ್ತಿದೆ ಎಂದು ವಾಗ್ದಾಲಿ ಅನ್ಡೆಸಿದರು.
ಬಿಜೆಪಿ ಸರ್ಕಾರದ ವಿರುದ್ಧ ಕಮಿಷನ್ ಆರೋಪ ಮಾಡಿದರು, 40% ಕಮಿಷನ್ ಬಗ್ಗೆ ಇನ್ನೂ ಸಾಬೀತು ಮಾಡಿಲ್ಲ, ಕೋರ್ಟ್ ನಲ್ಲಿ ಕೇಸ್ ದಾಖಲಿಸುತ್ತೇವೆ ಎಂದರು. ಇನ್ನೂ ಕೇಸ್ ಹಾಕಿಲ್ಲ. ಕಾಂಗ್ರೆಸ್ ನವರು ತಮ್ಮ ಕಾಲದ ಟೆಂಡರ್ ಅಕ್ರಮದ ಬಗ್ಗೆ ಉತ್ತರ ಕೊಡಲಿ. ನಂತರ ನಮ್ಮ ಬಗ್ಗೆ ಆರೋಪ ಮಾಡಲಿ ಎಂದು ಹೇಳಿದರು.
*ರಾಜ್ಯ ಸರ್ಕಾರದ ಟೆಂಡರ್ ನಲ್ಲಿ ಭಾರಿ ಗೋಲ್ ಮಾಲ್; ಶಾಸಕರಿಂದಲೇ ಮಾಹಿತಿ ಬಹಿರಂಗ; ಡಿ.ಕೆ.ಶಿವಕುಮಾರ್ ಗಂಭೀರ ಆರೋಪ*
https://pragati.taskdun.com/state-govttender-golmald-k-shivakumar/
*ತೀವ್ರ ಕುತೂಹಲ ಮೂಡಿಸಿದ ಜೆ.ಪಿ.ನಡ್ಡಾ ನಡೆ; ಶೃಂಗೇರಿ ಮಠಕ್ಕೆ ಭೇಟಿ ನೀಡಲಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ*
https://pragati.taskdun.com/j-p-naddavisitshrungeri-matafeb-20th/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ