Latest

*ತೀವ್ರ ಕುತೂಹಲ ಮೂಡಿಸಿದ ಜೆ.ಪಿ.ನಡ್ಡಾ ನಡೆ; ಶೃಂಗೇರಿ ಮಠಕ್ಕೆ ಭೇಟಿ ನೀಡಲಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕೀಯ ಚಟುವಟಿಕೆಗಳುಇ ದಿನದಿಂದ ದಿನಕ್ಕೆ ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ, ಶೃಂಗೇರಿ ಮಠಕ್ಕೆ ಭೇಟಿ ನೀಡುತ್ತಿದ್ದು, ದಿನಾಕ ನಿಗದಿಯಾಗಿದೆ.

ಫೆಬ್ರವರಿ 20ರಂದು ಜೆ.ಪಿ.ನಡ್ಡಾ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಗೆ ಅಗಮಿಸಲಿದ್ದು, ಅಂದು ರಾತ್ರಿ ಶೃಂಗೇರಿ ಶರದಾಂಬಾ ಮಠಕ್ಕೆ ಜೆ.ಪಿ ನಡ್ಡಾ ಭೇಟಿ ನೀಡಲಿದ್ದಾರೆ. ಶಾರದಾಂಬೆಯ ದರ್ಶನ ಪಡೆದ ಬಳಿಕ ಜಗದ್ಗುರುಗಳ ಭೇಟಿ ಮಾಡಲಿದ್ದಾರೆ.

Home add -Advt

ಜಗದ್ಗುರುಗಳ ಭೇಟಿಗಾಗಿ ಜೆ.ಪಿ.ನಡ್ಡಾ, 20 ನಿಮಿಷಗಳ ಕಾಲಾವಕಾಶ ಕೇಳಿದ್ದಾರೆ. ಇತ್ತೀಚೆಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಶೃಂಗೇರಿ ಮಠದ ಮೇಲೆ ದಾಳಿ ಮಾಡಿದ್ದವರ ಬಗ್ಗೆ ಎಚ್ಚರಿಕೆಯಿಂದ ಇರಿ ಎಂದು ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಈಗ ಜೆ.ಪಿ.ನಡ್ಡಾ ಶೃಂಗೇರಿ ಮಠಕ್ಕೆ ಭೇಟಿ, ಜಗದ್ಗುರಗಳ ಭೇಟಿ ವಿಚಾರ ರಾಜ್ಯ ರಾಜಕಾರಣದಲ್ಲಿ ಮಹತ್ವ ಪಡೆದುಕೊಂಡಿದೆ.

*ಕರ್ನಾಟಕ ಸೇರಿ 3 ರಾಜ್ಯ, 40 ಕಡೆಗಳಲ್ಲಿ NIA ದಾಳಿ*

https://pragati.taskdun.com/karnatakatamial-nadukerala3-statenia-raid/

Related Articles

Back to top button