Belagavi NewsBelgaum NewsKannada NewsKarnataka NewsPolitics

*ಸುವರ್ಣ ವಿಧಾನಸೌಧದ ಆವರಣದಲ್ಲಿ ಉದ್ಯಾನವನ ಹಾಗೂ ಕಾರಂಜಿಯ ಉದ್ಘಾಟಿಸಿದ ಸಿಎಂ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಸುವರ್ಣ ವಿಧಾನಸೌಧದ ಆವರಣದಲ್ಲಿ ಉದ್ಯಾನವನ ಹಾಗೂ ಕಾರಂಜಿಯ ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೆರವೇರಿಸಿದರು.

ಒಂದೂವರೆ ಎಕರೆ ವಿಸ್ತೀರ್ಣದಲ್ಲಿ ಈ ಉದ್ಯಾನವನ ಹಾಗೂ ಸೌಂದರ್ಯೀಕರಣ ಕಾಮಗಾರಿ ನಡೆದಿದ್ದು ಸುವರ್ಣಸೌಧದ ಭವ್ಯವಾದ ವಾಸ್ತುಶಿಲ್ಪಕ್ಕೆ ತೋಟಗಾರಿಕೆಯ ವಿನ್ಯಾಸವು ಪೂರಕವಾಗಿದೆ.

ಕೆ.ಆರ್.ಎಸ್ ನ ಹಾಗೂ ಆಲಮಟ್ಟಿ ಉದ್ಯಾನವನಗಳ ಮಾದರಿಗಳನ್ನು ಅಳವಡಿಸಿಕೊಂಡು ಸುವರ್ಣ ವಿಧಾನಸೌಧದ ಈ ಉದ್ಯಾನವನವನ್ನು ಅಭಿವೃದ್ಧಿ ಪಡಿಸಲಾಗಿದೆ

ಸುವರ್ಣಸೌಧದ ಆವರಣದ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಹಾಗೂ ಡಾ: ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗಳ ಸುತ್ತಲು ನಿರ್ಮಿಸಿರುವ ಉದ್ಯಾನವನ ಹಾಗೂ ಸೌಂದರ್ಯೀಕರಣವು ಈ ಪ್ರದೇಶಕ್ಕೆ ನೂತನ ಮೆರಗನ್ನು ನೀಡಿದೆ.

Home add -Advt

ಒಟ್ಟು 4.63 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗಿರುವ ಉದ್ಯಾನವನ ಮತ್ತು ಸೌಂದರ್ಯೀಕರಣದ ಯೋಜನೆಯಡಿ ತೆರೆದ 2 ರಂಗಮಂದಿರವೂ ಇದ್ದು ಒಟ್ಟು 400 ಮಂದಿ ಕುಳಿತುಕೊಳ್ಳಬಹುದಾದ ವ್ಯವಸ್ಥೆ ಇದೆ. ಒಟ್ಟಾರೆ 08 ಕಾರಂಜಿಗಳನ್ನು ಉದ್ಯಾನವನದಲ್ಲಿ ಅಳವಡಿಸಲಾಗಿದ್ದು, ಕಲ್ಲಿನ ಮೆಟ್ಟಿಲುಗಳ ಜಲಪಾತ, ಮೂವತ್ತು ಬಗೆಯ ಗಿಡಗಳನ್ನು ನೆಡಲಾಗಿದೆ.

Related Articles

Back to top button