ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಮತ್ತು ಭಾನುವಾರ ಬೆಳಗಾವಿ ಜಿಲ್ಲೆಯಲ್ಲಿ ಸರಣಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಶನಿವಾರ ಸಂಜೆ ಬೆಳಗಾವಿಗೆ ಆಗಮಿಸುವ ಅವರು ಸಂಕೇಶ್ವರ ಮತ್ತು ಹುಕ್ಕೇರಿಗಳಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.
ರಾತ್ರಿ 7.30ಕ್ಕೆ ಸಂಕೇಶ್ವರದಲ್ಲಿ ಪುರಸಭೆ ಆಡಳಿತ ಕಚೇರಿ ಹಾಗೂ ಸಂಕೇಶ್ವರ ಹೈಟೆಕ್ ಬಸ್ ನಿಲ್ದಾಣ ಉದ್ಘಾಟಿಸುವರು.
ಅಲ್ಲಿಂದ ಹುಕ್ಕೇರಿಗೆ ತೆರಳಿ ರಾತ್ರಿ 8.30ಕ್ಕೆ ಹುಕ್ಕೇರಿ ಬಸ್ ಘಟಕ, ಬಸ್ ನಿಲ್ದಾಣ ಹಾಗೂ ಡಿಪ್ಲೋಮಾ ಕಾಲೇಜು ಉದ್ಘಾಟಿಸುವರು. ರಾತ್ರಿ ಹುನ್ನೂರು ಐಬಿಯಲ್ಲಿ ಊಟ ಮಾಡಿ ಬೆಳಗಾವಿಗೆ ಆಗಮಿಸುವರು.
ರಾತ್ರಿ ಬೆಳಗಾವಿಯಲ್ಲಿ ವಾಸ್ತವ್ಯ ಮಾಡಿ ಭಾನುವಾರ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.
ಭಾನುವಾರ ಬೆಳಗ್ಗೆ 9.15ಕ್ಕೆ ಶಿವಾಜಿ ಉದ್ಯಾನದಲ್ಲಿ ಇ ಲೈಬ್ರರಿ ಉದ್ಘಾಟಿಸುವರು. 9.30ಕ್ಕೆ ಮಹಾವೀರಭವನದಲ್ಲಿ ಬಿಜೆಪಿಯಿಂದ ಆಯ್ಕೆಯಾಗಿರುವ ನೂತನ ಪಾಲಿಕೆ ಸದಸ್ಯರಿಗೆ ಸನ್ಮಾನ ನೆರವೇರಿಸುವರು. 10.15ಕ್ಕೆ ಟಿಳಕವಾಡಿಯಲ್ಲಿ ವಿಕಲಚೇತನ ಮಕ್ಕಳಿಗಾಗಿ ನಿರ್ಮಾಣವಾಗಿರುವ ಮಹಾತ್ಮಾಫುಲೆ ಉದ್ಯಾನ ಉದ್ಘಾಟಿಸುವರು.
ನಂತರ 11 ಗಂಟೆಗೆ ಸಾವಗಾಂವ್ ರಸ್ತೆಯ ಸುರೇಶ ಅಂಗಡಿ ಎಜುಕೇಶನ್ ಫೌಂಡೇಶನ್ ಆವರಣದಲ್ಲಿ ದಿ. ಸುರೇಶ ಅಂಗಡಿ ಅವರ ಪುತ್ಥಳಿಯನ್ನೂ ಅನಾವರಣ ಮಾಡುವರು.
2 ಗಂಟೆಗೆ ಬೆಳಗಾವಿಯಿಂದ ರಸ್ತೆ ಮೂಲಕ ಗದಗ ಜಿಲ್ಲೆಗೆ ತೆರಳುವರು. ಗದಗದ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ನೂತನ ಆಮ್ಲಜನಕ ಉತ್ಪಾದನಾ ಘಟಕ ಹಾಗೂ 100 ಹಾಸಿಗೆಗಳ ಮೊಡ್ಯೂಲರ್ ಆಸ್ಪತ್ರೆ ಉದ್ಘಾಟಿಸುವರು.
ಮುಖ್ಯಮಂತ್ರಿಗಳ ಪ್ರವಾಸ ಪಟ್ಟಿ ಇಲ್ಲಿದೆ –
ಸೆ.26ರಂದು ದಿ.ಸುರೇಶ ಅಂಗಡಿ ಪುತ್ಥಳಿ ಅನಾವರಣ: ಸಿಎಂ ಸೇರಿ ಹಲವು ಗಣ್ಯರ ಆಗಮನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ