Belagavi NewsBelgaum NewsKarnataka NewsPolitics

*ಪ್ರತಿಭಟನಾ ಸಮಾವೇಶದಲ್ಲಿ ಪೊಲೀಸರ ಮೇಲೆ ಗರಂ ಆದ ಸಿಎಂ ಸಿದ್ದರಾಮಯ್ಯ* 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಬೆಳಗಾವಿಯಲ್ಲಿ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ನಡೆಸುತ್ತಿರುವ ಪ್ರತಿಭಟನಾ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪೊಲೀಸರ ಮೇಲೆ ಗರಂ ಆದ ಪ್ರಸಂಗ ನಡೆದಿದೆ.

ಬಿಜೆಪಿಯ ಮಹಿಳಾ ಕಾರ್ಯಕರ್ತರು ಕಪ್ಪು ಪಟ್ಟಿ ಪ್ರದರ್ಶಿಸಿ, ವೇದಿಕೆಯತ್ತ ಮುನ್ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ಕೆಲ ಕಾಲ ಭಾಷಣ ನಿಲ್ಲಿಸಿದ ಸಿಎಂ ಸಿದ್ದರಾಮಯ್ಯ, ಪೊಲೀಸರು ಏನು ಮಾಡುತ್ತೀದ್ದೀರಾ? ಎಂದು ಗರಂ ಆದರು. ಸಮಾವೇಶಕ್ಕೆ ಬಂದು ಅಡ್ಡಿ ಪಡಿಸಲು ಯತ್ನಿಸಿದರೂ ಸುಮ್ಮನೇ ನಿಂತಿರುವುದನ್ನು ಕಂಡು ಸಿಎಂ ಕ್ಷಣ ಕಾಲ ಕೋಪಗೊಂಡರು. ಅಲ್ಲಿ ಏನು ನಡೆಯುತ್ತಿದೆ ಗೊತ್ತಾಗಲ್ವಾ ಎಂದು ಗದರಿದ ಸಿಎಂ, ಸಿಟ್ಟಿನಿಂದ ಪೊಲೀಸ್ ಅಧಿಕಾರಿ ಮೇಲೆ ಹೊಡೆಯುವಂತೆ ಕೈ ಎತ್ತಿದ್ದಾರೆ.

ಸಮಾವೇಶದಲ್ಲಿ ಯಾವನು ಅಲ್ಲಿ ಗಲಾಟೆ ಮಾಡುತ್ತಿರುವುದು? ಪರಿಸ್ಥಿತಿ ಮೇಲೆ ನಿಗಾ ಇಡಲು ಆಗಲ್ವಾ ಎಂದು ಸಿಎಂ ಏರು ಧ್ವನಿಯಲ್ಲಿ ಸಿಟ್ಟಾದರು. ಈ ವೇಳೆ ಸಚಿವ ಹೆಚ್‌ಕೆ ಪಾಟೀಲ್, ಎಂಬಿ ಪಾಟೀಲ್‌ ಅವರು ಸಿಎಂ ಅವರನ್ನು ಸಮಾಧಾನ ಮಾಡಿದರು.

Related Articles

Back to top button