ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮಂಗಳವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಳಗಾವಿಯ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಶಾಸಕ ಅನಿಲ ಬೆನಕೆ ಈ ಕುರಿತು ಮಾಹಿತಿ ನೀಡಿದ್ದಾರೆ.
ಕ್ರೀಡಾ ಇಲಾಖೆ ವತಿಯಿಂದ ನೆಹರು ನಗರದಲ್ಲಿ ನಿರ್ಮಾಣವಾಗಿರುವ ವಿವಿಧೋದ್ದೇಶ ಅಂತರರಾಷ್ಟ್ರೀಯ ಮಟ್ಟದ ಸುವ್ಯವಸ್ಥಿತ ಒಳಾಂಗಣ ಕ್ರೀಡಾಂಗಣ (ಜಿಮನಾಸ್ಟಿಕ್ ಉಪಕರಣಗಳೊಂದಿಗೆ), ಮಹಾನಗರ ಪಾಲಿಕೆಯ ಆವರಣದಲ್ಲಿ ಐನಾಕ್ಸ ಕಟ್ಟಡ, ಸ್ಮಾರ್ಟ ಸಿಟಿ ಯೋಜನೆಯಡಿ ರೇಲ್ವೆ ನೀಲ್ದಾಣದ ಎದುರು ಸುಸಜ್ಜಿತ ಬಸ್ ತಂಗುದಾಣಗಳನ್ನು ಬಸವರಾಜ ಬೊಮ್ಮಾಯಿ ಮಂಗಳವಾರ ಸಂಜೆ 5.30ರಿಂದ 6.30ರ ಸಮಯದಲ್ಲಿ ಉದ್ಘಾಟಿಸುವರು.
- ದಿ. ೨೧-೧೨-೨೦೨೧ ರಂದು ಸಂಜೆ ೫.೩೦ ಗಂಟೆಗೆ
ನೇಹರು ನಗರದಲ್ಲಿ ವಿವಿಧೋದ್ದೇಶ ಅಂತರರಾಷ್ಟ್ರೀಯ ಮಟ್ಟದ ಸುವ್ಯವಸ್ಥಿತ ಒಳಾಂಗಣ ಕ್ರೀಡಾಂಗಣ (ಜಿಮನಾಸ್ಟಿಕ್ ಉಪಕರಣಗಳೊಂದಿಗೆ)
ಸ್ಥಳ : ಮಾಹೇಶ್ವರಿ ಅಂಧ ಶಾಲೆಯ ಎದುರು ನೆಹರು ನಗರ, ಬೆಳಗಾವಿ
2. ದಿ. ೨೧-೧೨-೨೦೨೧ ರಂದು ಸಂಜೆ ೬.೦೦ ಗಂಟೆಗೆ
ಬೆಳಗಾವಿ ನಗರದ ಮಹಾನಗರ ಪಾಲಿಕೆಯ ಆವರಣದಲ್ಲಿ ಐನಾಕ್ಸ ಕಟ್ಟಡ
ಸ್ಥಳ : ಮಹಾನಗರಪಾಲಿಕೆ ಆವರಣ ಎಸ್.ಪಿ. ಆಫೀಸ್ ಪಕ್ಕದಲ್ಲಿ ಬೆಳಗಾವಿ
3. ದಿ. ೨೧-೧೨-೨೦೨೧ ರಂದು ಸಂಜೆ ೬.೩೦ ಗಂಟೆಗೆ
ಸ್ಮಾರ್ಟ ಸಿಟಿ ಯೋಜನೆಯಡಿ ರೇಲ್ವೆ ನೀಲ್ದಾಣದ ಎದುರು ಸುಸಜ್ಜಿತ ಬಸ್ ತಂಗುದಾಣಗಳ, ನೂತನ ಕಟ್ಟಡದ ಲೋಕಾರ್ಪಣೆ
ಸ್ಥಳ : ರೇಲ್ವೆ ನಿಲ್ದಾಣ ಎದುರು ಕ್ಯಾಂಪ್, ಬೆಳಗಾವಿ
ಬೆಳಗಾವಿಯಲ್ಲಿ ನಿಷೇಧಾಜ್ಞೆ ವಿಸ್ತರಣೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ