Latest

ರಾಜು ಶ್ರೀವಾಸ್ತವ ಸಾವನ್ನು ಕೆಟ್ಟದ್ದಾಗಿ ಕಮೆಂಟ್ ಮಾಡಿದ ಕಮೆಡಿಯನ್ ಗೆ ನೆಟ್ಟಿಗರಿಂದ ಛೀಮಾರಿ

ಪ್ರಗತಿ ವಾಹಿನಿ, ಮುಂಬೈ: ಖ್ಯಾತ ಸ್ಟ್ಯಾಂಡಪ್ ಕಮೇಡಿಯನ್ ರಾಜು ಶ್ರೀ ವಾಸ್ತವ ಅವರ ನಿಧನವನ್ನು ಸಂಭ್ರಮಿಸುವ ರೀತಿಯಲ್ಲಿ ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್ ಮಾಡಿದ್ದ ಕಮೇಡಿಯನ್ ರೋಹನ್ ಜೋಶಿಗೆ ನೆಟ್ ಬಳಕೆದಾರರು ಹಿಗ್ಗಾ ಮುಗ್ಗಾ ಜಾಡಿಸಿದ್ದಾರೆ. ಬಳಿಕ ಜೋಶಿ ತಮ್ಮ ಪೋಸ್ಟ್ ಡಿಲೀಟ್ ಮಾಡಿದ್ದಾರೆ.

ಶ್ರೀ ವಾಸ್ತವ ಅವರ ನಿಧನಕ್ಕೆ ಜೋಶಿ ಒಳ್ಳೆಯದಾಯಿತು ಎಂಬ ಅರ್ಥದಲ್ಲಿ ( good riddance) ಕಮೆಂಟ್ ಮಾಡಿದ್ದರು.
ಅಷ್ಟೇ ಅಲ್ಲದೆ, ರಾಜು ಶ್ರೀ ವಾಸ್ತವ ಹೊಸ ಕಮೆಡಿಯನ್ ಗಳ ತೇಜೋವಧೆ ಮಾಡುವ ಯಾವುದೇ ಅವಕಾಶವನ್ನು ಬಿಡುತ್ತಿರಲಿಲ್ಲ ಎಂಬ ಅರ್ಥ ಬರುವ ಒಕ್ಕಣಿಕೆಯನ್ನೂ ಬರೆದಿದ್ದರು.

Home add -Advt

ಜೋಶಿ ಅವರ ಮೆಸೇಜ್ ಗೆ ಕೆಲವರು, ಮೃತ ಪಟ್ಟವರ ಬಗ್ಗೆ ಒಳ್ಳೆಯ ಮಾತು ಹೇಳಲಾಗಿದ್ದರೆ ಸುಮ್ಮನಿರಿ, ಆದರೆ ಕೆಟ್ಟ ಮಾತು ಹೇಳಬೇಡಿ ಎಂದು ಅಸಮಾಧಾನ ವ್ಯಕ್ತಪಡಿಸಿ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೊಬ್ಬರು “ನಾಚಿಕೆಗೇಡಿನ ಪೋಸ್ಟ್” ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಜೋಶಿ ತಮ್ಮ ಪೋಸ್ಟ್ ಡಿಲೀಟ್ ಮಾಡಿದರೂ ನೆಟ್ಟಿಗರ ಆಕ್ರೋಶ ಮುಂದುವರೆದಿದೆ.

ಬೆಳಗಾವಿಯಲ್ಲಿ ಮಕ್ಕಳ ಸುರಕ್ಷತೆ ಅರಿವು ಕಾರ್ಯಕ್ರಮ

Related Articles

Back to top button