Belagavi NewsBelgaum NewsFilm & EntertainmentKannada NewsKarnataka News

*ಹಾಸ್ಯ ಬರಹಗಾರ ಎಂ.ಎಸ್. ನರಸಿಂಹಮೂರ್ತಿಗೆ ರಂಗಸೃಷ್ಟಿ ಸನ್ಮಾನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಖ್ಯಾತ ಹಾಸ್ಯ ಬರಹಗಾರ ಎಂ.ಎಸ್.ನರಸಿಂಹ ಮೂರ್ತಿ ಅವರನ್ನು ರಂಗಸೃಷ್ಟಿ ಸಾಂಸ್ಕೃತಿಕ ಸಂಘಟನೆ ವತಿಯಿಂದ ಸೋಮವಾರ ಸನ್ಮಾನಿಸಲಾಯಿತು.

ಕನ್ನಡಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ರಂಗಸೃಷ್ಟಿ ಪದಾಧಿಕಾರಿಗಳು ನರಸಿಂಹಮೂರ್ತಿ ಅವರನ್ನು ಸನ್ಮಾನಿಸಿದರು. ಇದಕ್ಕೂ ಮೊದಲು, ಮಂಗಳವಾರ ಪ್ರದರ್ಶನವಾಗಲಿರುವ ಎಂ.ಎಸ್ ನರಸಿಂಹ ಮೂರ್ತಿ ಅವರ ರಚನೆಯ ಸೆಕೆಂಡ್ ಹ್ಯಾಂಡ್ ಸದಾಶಿವ ನಾಟಕದ ರಂಗತಾಲೀಮನ್ನು ಅವರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. 

ಸೆಕೆಂಡ್ ಹ್ಯಾಂಡ್ ಸದಾಶಿವ ಅಮೇರಿಕದಲ್ಲಿ ಅತ್ಯಂತ ಯಶಸ್ವಿಯಾಗಿ ಪ್ರದರ್ಶನ ಕಂಡ ನಾಟಕವಾಗಿದ್ದು, ರಂಗಸೃಷ್ಟಿ ತಂಡದ ಕಲಾವಿದರು ಮನೋಜ್ಞವಾಗಿ ಅಭಿನಯಿಸಿದ್ದಾರೆ. ನಿರ್ದೇಶನ ಮತ್ತು ಅಭಿನಯ ಎರಡೂ ಅತ್ಯುತ್ತಮವಾಗಿತ್ತು. ಸ್ಥಳೀಯವಾಗಿ ಭಾಷೆಗಳನ್ನು ಬದಲಾವಣೆ ಮಾಡಿಕೊಂಡಾಗ ನಾಟಕ ಹೆಚ್ಚು ಪರಿಣಾಮಕಾರಿಯಾಗಿ ಮೂಡಿಬರುತ್ತದೆ. ಅದನ್ನು ಇಲ್ಲಿ ಮಾಡಿರುವುದು ಶ್ಲೀಘನೀಯ ಎಂದರು. 

ರಂಗಸೃಷ್ಟಿಯ ಅಧ್ಯಕ್ಷ ರಮೇಶ ಜಂಗಲ, ಉಪಾಧ್ಯಕ್ಷರಾದ ಎಂ.ಕೆ.ಹೆಗಡೆ, ಶೈಲಜಾ ಬಿಂಗೆ, ಕಾರ್ಯದರ್ಶಿ ಶರಣಗೌಡ ಪಾಟೀಲ, ಖಜಾಂಚಿ ಶಾಂತಾ ಆಚಾರ್ಯ, ನಿರ್ದೇಶಕರಾದ ಡಾ.ರಾಮಕೃಷ್ಣ ಮರಾಠೆ, ಶಿರೀಶ ಜೋಶಿ, ಶರಣಯ್ಯ ಮಠಪತಿ, ಕನ್ನಡ ಭವನದ ಕಾರ್ಯದರ್ಶಿ ಯ.ರು.ಪಾಟೀಲ, ಕಲಾವಿದರಾದ ವಾಮನ ಮಳಗಿ, ವಿಶ್ವನಾಥ ದೇಸಾಯಿ, ಅನುಶ್ರೀ ರಘುವೀರ, ನಿವೃತ್ತ ಪ್ರಾಚಾರ್ಯ ಡಾ.ಬಸವರಾಜ ಜಗಜಂಪಿ, ಮುಜರಾಯಿ ಇಲಾಖೆಯ ನಿವೃತ್ತ ಅಧಿಕಾರಿ ರವಿ ಕೊಟಾರಗಸ್ತಿ ಮೊದಲಾದವರು ಇದ್ದರು. 

ಸೆಕೆಂಡ್ ಹ್ಯಾಂಡ್ ಸದಾಶಿವ ಹಾಸ್ಯ ನಾಟಕ ಮಂಗಳವಾರ (ಏ.28) ಸಂಜೆ 6.30ಕ್ಕೆ ಕನ್ನಡ ಭವನದಲ್ಲಿ ಪ್ರದರ್ಶನವಾಗಲಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button