*ಕಾಂಗ್ರೆಸ್ ಪಕ್ಷವೇ ಅಧಿಕಾರದಿಂದ ಹೋಗಬೇಕು: ಸಿ.ಟಿ ರವಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಾಂಗ್ರೆಸ್ ಡಿಎನ್ಎದಲ್ಲಿಯೇ ಭ್ರಷ್ಟಾಚಾರ ಇದೆ. ಒಬ್ಬ ಭ್ರಷ್ಟ ಹೋದರೆ ಮತ್ತೊಬ್ಬ ಭ್ರಷ್ಟ ಬರುತ್ತಾನೆ ಹಾಗಾಗಿ ಕಾಂಗ್ರೆಸ್ ಪಕ್ಷವೇ ಅಧಿಕಾರದಿಂದ ಹೋಗಬೇಕು ಎಂದು ವಿಧಾನ ಪರಿಷತ ಸದಸ್ಯ ಸಿ.ಟಿ ರವಿ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಗೆ 136 ಸ್ಥಾನಗಳ ಬೆಂಬಲ ಇದೆ, ಯಾರಾದರೂ ಸಿಎಂ ಆಗಲಿ. ಭ್ರಷ್ಟಾಚಾರ, ಬೆಲೆ ಏರಿಕೆ ಬಗ್ಗೆ ನಮ್ಮ ಕಳಕಳಿ ಇದೆ ಎಂದು ವಿಧಾನ ಪರಿಷತ ಸದಸ್ಯ ಸಿಟಿ ರವಿ ಅವರು ಹೇಳಿದರು.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಡಿಎನ್ಎದಲ್ಲಿಯೇ ಭ್ರಷ್ಟಾಚಾರ ಇದೆ.ಜಾತಿ ಜಾತಿ ಒಡೆಯುವ,
ಹಿಂದೂ ಸಮಾಜ ಒಡೆಯುವ ಷಡ್ಯಂತ್ರದ ಬಗ್ಗೆ ಕಾಳಜಿ ಇದೆ. ಕಾಂಗ್ರೆಸ್ ಹೈಕಮಾಂಡ ವೀಕ್ ಆಗಿದೆ, ನಾನೇ ಎಂದುವರು ದಶಕದ ಹಿಂದೆ ಮರುಕ್ಷಣ ಆ ಸ್ಥಾನದಲ್ಲಿ ಇರುತ್ತಿರಲಿಲ್ಲ ಆದರೆ ಸಿದ್ದರಾಮಯ್ಯ ಪದೇ ಪದೇ ನಾನೇ ನಾನೇ ಎನ್ನುತ್ತಿದ್ದಾರೆ. ಸಿದ್ದರಾಮಯ್ಯ ಹೈಕಮಾಂಡಗೆ ಸೆಡ್ಡು ಹೊಡೆದಿದ್ದಾರೆ. ಕಾಂಗ್ರೆಸ್ ಹೈಕಮಾಂಡ ವೀಕ್ ಆಗಿದೆ ಎಂದರು.
ನವೆಂಬರ್ ಕ್ರಾಂತಿ ವಿಚಾರವಾಗಿ ಮಾತನಾಡಿದ ಅವರು, ಕ್ರಾಂತಿ ಎನ್ನುವುದು ಒಳ್ಳೆದಕ್ಕೆ ಬಳಕೆಯಾಗುವ ಪದ, ಯಾರು ಸಿಎಂ ಆದರೂ ರಾಜ್ಯಕ್ಕೆ ಒಳ್ಳೆದಾಗುವ ವಿಶ್ವಾಸವಿಲ್ಲ.ಒಬ್ಬ ಭ್ರಷ್ಟ ಹೋದರೆ ಮತ್ತೊಬ್ಬ ಭ್ರಷ್ಟ ಬರುತ್ತಾನೆ. ಹೀಗಾಗಿ ಕಾಂಗ್ರೆಸ್ ಪಕ್ಷವೇ ಅಧಿಕಾರದಿಂದ ಹೋಗಬೇಕು ಎಂದು ವಾಗ್ದಾಳಿ ನಡೆಸಿದರು.
ಬಹುತೇಕ ಜಿಲ್ಲೆಗಳಲ್ಲಿ ಮಂತ್ರಿಗಳು ಜನರ ಸಂಪರ್ಕ ಕಳೆದುಕೊಂಡಿದ್ದಾರೆ. ಸಹಕಾರ ಸಂಘಗಳ ಚುನಾವಣೆಯಲ್ಲಿ ಮುಳುಗಿದ್ದಾರೆ. ಜನರ ಕಷ್ಟಕೇಳುವ ಸಂವೇದನೆ ಅವರಿಗೆ ಇರಲಿಲ್ಲ. ಈಗಲಾದರೂ ಜನರಿಗೆ ಸಂವೇದನೆ ತೋರಿಸಬೇಕು ಎಂದರು.
ರಾಜ್ಯದಲ್ಲಿ ನಾನು ಸಿಎಂ ನಾನು ಸಿಎಂ ಚರ್ಚೆ ನಡೆದಿದೆ. ಯಾರು ಸಿಎಂ ಎಂಬ ಚರ್ಚೆ ಮುಖ್ಯವಲ್ಲ. ಜನ ನಿಮಗೆ ಅಧಿಕಾರಕೊಟ್ಟಿದಾರೆ ಯಾರಾದರೂ ಸಿಎಂ ಆಗಲಿ ಮೊದಲು ಜನರ ಕಷ್ಟಗಳಿಗೆ ಸ್ಪಂದಿಸಿ. ಭ್ರಷ್ಟಾಚಾರದ ಬಗ್ಗೆ ಗುತ್ತಿಗೆದಾರರ ಪತ್ರ ಓದಿ ನಾಚಿಕೆ ಆಗಲಿಲ್ಲವಾ. ಜನ ಏನು ಎಂದುಕೊಳ್ಳುತ್ತಾರೆಂಬ ಅರಿವು ನಿಮಗೆ ಆಗಿಲ್ಲವಾ? ಕಮೀಷನ್, ಭ್ರಷ್ಟಾಚಾರ ಡಬಲ್ ಆಗಿದೆ ಎಂದು ನಿಮ್ಮ ಸರ್ಕಾರಕ್ಕೆ ಕೊಟ್ಟಿರುವ ಸರ್ಟಿಫಿಕೇಟ್ ಅದು. 19ವಿವಿಧ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದಿರಿ? ಪಟ್ಟಿ ಕೊಡಬೇಕಾ?. ಬರ್ತ್ ಸರ್ಟಿಫಿಕೇಟ್ ನಿಂದ ಡೆತ್ ಸರ್ಟಿಫಿಕೇಟ್ ವರೆಗೆ, ಅಡುಗೆ ಎಣ್ಣೆಯಿಂದ ಕುಡಿಯೋ ಎಣ್ಣೆವರೆಗೂ ಬೆಲೆ ಏರಿಕೆ ಹೆಚ್ಚಿಸಿದ್ದೀರಿ ಎಂದು ವಾಗ್ದಾಳಿ ನಡೆಸಿದರು.