Cancer Hospital 2
Bottom Add. 3

*ಮತ್ತೆ ಬಿಜೆಪಿಯನ್ನು ಕೆಣಕಿದ ಕಾಂಗ್ರೆಸ್!*

ಎಂ.ಕೆ.ಹೆಗಡೆ; ಬೆಂಗಳೂರು: ಬಿಜೆಪಿ ವಿಪಕ್ಷ ನಾಯಕನನ್ನು ಆಯ್ಕೆ ಮಾಡುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಕಾಲೆಳೆದಿದೆ.

ಕರ್ನಾಟಕದಲ್ಲಿ ವಿರೋಧ ಪಕ್ಷದ ನಾಯಕನಿಲ್ಲ ಎಂಬ ಸಂಗತಿಯನ್ನು ಜನತೆ ಹಾಗೂ ಬಿಜೆಪಿ ಪಕ್ಷ ಬಹುತೇಕ ಮರೆತೇ ಹೋಗಿದ್ದಾರೆ. ಪ್ರಮುಖ ಸಾಂವಿಧಾನಿಕ ಹುದ್ದೆಯೊಂದನ್ನು ಖಾಲಿ ಬಿಟ್ಟಿರುವ ಬಿಜೆಪಿ ಪ್ರಜಾತಂತ್ರ ವ್ಯವಸ್ಥೆಗೆ ಹಾಗೂ ಸಂವಿಧಾನಕ್ಕೆ ಅಪಚಾರ ಮಾಡುತ್ತಿದೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಬಿಜೆಪಿಗೆ ಆಡಳಿತದಲ್ಲಿ ಮಾತ್ರ ಅಸಾಮರ್ಥ್ಯವಿರುವುದಲ್ಲ, ಆಂತರಿಕ ಕಲಹ ನಿಭಾಯಿಸುವುದರಲ್ಲಿ, ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡುವುದರಲ್ಲೂ ಅಸಮರ್ಥವಾಗಿದೆ ಎಂದು ಹೇಳುವ ಮೂಲಕ ಬಿಜೆಪಿಯನ್ನು ಮತ್ತೆ ಕೆಣಕಿದೆ.

Dear BJP Karnataka, ವಿರೋಧ ಪಕ್ಷದ ನಾಯಕನ ಆಯ್ಕೆಗೆ ನಿಮ್ಮ ವರಿಷ್ಠರಿಗೆ “ಸೂಕ್ತ ಸಮಯ” ಬರಲಿಲ್ಲವೇ? ಕುಮಾರಸ್ವಾಮಿಯವರನ್ನು ಭೇಟಿ ಮಾಡಲು ಸಮಯವಿರುವ ಹೈಕಮಾಂಡಿಗೆ ಸ್ವಂತ ಪಕ್ಷದ ಸಮಸ್ಯೆ ಬಗೆಹರಿಸಲು ಸಮಯವಿಲ್ಲವೇ? ಅಥವಾ ನಿಮ್ಮಲ್ಲಿ ಆ ಹುದ್ದೆಗೆ ಯೋಗ್ಯತೆ, ಅರ್ಹತೆ ಇರುವ ವ್ಯಕ್ತಿ ಯಾರೂ ಇಲ್ಲವೇ? ಎಂದು ಪ್ರಶ್ನಿಸಿದೆ.

ಕರ್ನಾಟಕದಲ್ಲಿ ಸಾಂವಿಧಾನಿಕ ಹುದ್ದೆಯಾದ ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನ ಖಾಲಿ ಇದೆ ಎಂದು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಬಿಜೆಪಿಯನ್ನು ಕೆಣಕಿದೆ.

Bottom Add3
Bottom Ad 2

You cannot copy content of this page