Kannada NewsKarnataka NewsLatest

ಗ್ರಾಮೀಣ ಕ್ಷೇತ್ರದಲ್ಲಿ ಸ್ಮಾರ್ಟ್ ಹಳ್ಳಿಗಳ ನಿರ್ಮಾಣ -ಲಕ್ಷ್ಮಿ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಬೆಳಗಾವಿ ಗ್ರಾಮೀಣ ಕ್ಷೇತ್ರ ವ್ಯಾಪ್ತಿಯಲ್ಲಿ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ಶುಕ್ರವಾರ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಚಾಲನೆ ನೀಡಿದರು.

ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ 1 ಕೋಟಿ ರೂ. ವೆಚ್ಚದಲ್ಲಿ ವಿವಿಧ ಉದ್ಯಾನಗಳ ಅಭಿವೃದ್ಧಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು. ಕ್ಷೇತ್ರದ ಸಹ್ಯಾದ್ರಿ ನಗರ,  ಡ್ರೈವರ್ಸ್ ಕಾಲೋನಿ ಹಾಗೂ ಪೋಲಿಸ್ ಕಾಲೋನಿಗಳಲ್ಲಿ ಒಟ್ಟು 4 ಉದ್ಯಾನಗಳ ಅಭಿವೃದ್ಧಿಗೆ ಶಂಕುಸ್ಥಾಪನೆ ಮಾಡಲಾಯಿತು.

ವಾಕಿಂಗ್ ಟ್ರ್ಯಾಕ್, ಮಕ್ಕಳ ಆಟದ ಉಪಕರಣಗಳು, ಫ್ಯಾನ್ಸಿ ಲೈಟಿಂಗ್, ಓಪನ್‌ ಜಿಮ್ ಮೊದಲಾದ ಕಾಮಗಾರಿಗಳಿಗೆ ಗುದ್ದಲಿ ಪೂಜೆಯೊಂದಿಗೆ ಚಾಲನೆಯನ್ನು ನೀಡಲಾಯಿತು.

ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿ  ಮುಂದುವರಿಯಲಿದೆ. ಜನರ ಬಹುದಿನಗಳ ಬೇಡಿಕೆಗಳನ್ನು ನನಸು ಮಾಡುವುದೇ ನನ್ನ ಗುರಿ. ಎಷ್ಟು ವರ್ಷ ಎಂದು ಅವರು ಕಾಯುತ್ತಿರಬೇಕು. ಈಗ ಅವರು ಕಂಡಿದ್ದ ಕನಸು ನನಸಾಗುತ್ತಿದೆ. ಬೆಳಗಾವಿ ಸ್ಮಾರ್ಟ್ ಸಿಟಿ ಆಗುವಂತೆ ಗ್ರಾಮೀಣ ಕ್ಷೇತ್ರದಲ್ಲಿ ಸ್ಮಾರ್ಟ್ ಹಳ್ಳಿಗಳನ್ನು ನಿರ್ಮಾಣ ಮಾಡುತ್ತೇನೆ ಎಂದು ಲಕ್ಷ್ಮಿ ಹೆಬ್ಬಾಳಕರ್ ಈ ಸಂದರ್ಭದಲ್ಲಿ ಹೇಳಿದರು.

ಕಾಮಗಾರಿಗಳನ್ನು ಬೇಗ ಪೂರ್ಣಗೊಳಿಸುವ ಜೊತೆಗೆ ಗುಣಮಟ್ಟವನ್ನೂ ಕಾಪಾಡಲು ಆದ್ಯತೆ ನೀಡಲಾಗುವುದು. ಇದರ ಜವಾಬ್ದಾರಿಯನ್ನು ಸ್ಥಳೀಯರೂ ತೆಗೆದುಕೊಳ್ಳಬೇಕು.

ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಸ್ಥಳೀಯ ನಿವಾಸಿಗಳು ಸನ್ಮಾನಿಸಿದರು.

ಯುವರಾಜ ಕದಂ, ಶಂಕರ ಹುಲಿ, ಕೆ. ಗಸ್ತಿ, ಮುಸ್ತಾಕ ಮುಲ್ಲಾ, ಪಿ. ಅರಬಳ್ಳಿ, ಅರ್. ಎಂ. ಅಪ್ಪಾಸಾಬ್, ಎಂ. ಐ. ಸೂರ್ಯವಂಶಿ, ಡಿ. ಬಿ. ಗೊಂದಳಿ , ಅರ್. ಎಲ್. ನವನಾಳೆ, ಎಸ್. ಬಿ. ಮಂಗಾವತಿ, ಸ್ಮಾರ್ಟ್ ಸಿಟಿ ಅಧಿಕಾರಿಗಳು, ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು  ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button