Kannada News

ಡಾ. ಬಿ. ಆರ್. ಅಂಬೇಡ್ಕರ ಉದ್ಯಾನವನದಲ್ಲಿ ಸ್ಟಡಿ ಸೆಂಟರ್ ನಿರ್ಮಾಣ : ಶಾಸಕ ಅನಿಲ ಬೆನಕೆ ಮಾಹಿತಿ


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ನಗರದ ಡಾ. ಬಿ. ಆರ್. ಅಂಬೇಡ್ಕರ ಉದ್ಯಾನವನದಲ್ಲಿ ಸುಸಜ್ಜಿತ ಗ್ರಂಥಾಲಯ, ಸಾಂಸ್ಕೃತಿಕ ಭವನ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಐ.ಎ.ಎಸ್. ಕೆ.ಎ.ಎಸ್ ಐ.ಪಿ.ಎಸ್ ಕೋಚಿಂಗ್ ಸೆಂಟರ್ ಮಾಡಲು ೧ ಕೋಟಿ ೩೦ ಲಕ್ಷ ರೂಪಾಯಿ ಅನುದಾನವು ಬಿಡುಗಡೆಯಾಗಿದೆ.
ಮಾಹಿತಿ ನೀಡಿದ ಶಾಸಕ ಅನಿಲ ಬೆನಕೆ ಅವರ ವಿಶೇಷ ಪ್ರಯತ್ನದಿಂದ ಬೆಳಗಾವಿ ನಗರದ ಬಿಮ್ಸ್ ಆಸ್ಪತ್ರೆ ಎದುರುಗಡೆ ಇರುವ ಡಾ. ಬಾಬಾಸಾಹೇಬ ಅಂಬೇಡ್ಕರ ಉದ್ಯಾನವನದಲ್ಲಿ ರಾಜ್ಯ ಸರ್ಕಾರದ ವತಿಯಿಂದ ೧ ಕೋಟಿ ೩೦ ಲಕ್ಷ ಅನುದಾನವು ಮಂಜೂರಾಗಿದ್ದು, ಉದ್ಯಾನವನದಲ್ಲಿ ಸುಸಜ್ಜಿತ ಡಿಜಿಟಲ್ ಗ್ರಂಥಾಲಯ, ಸಾಂಸ್ಕೃತಿಕ ಭವನ, ಐಎಎಸ್, ಐಪಿಎಸ್, ಕೆಎಎಸ್ ತರಬೇತಿ ಕೇಂದ್ರ ನಿರ್ಮಾಣ ಮಾಡಲಾಗುವುದು ಎಂದರು. ಅಡಿಗಲ್ಲು ಸಮಾರಂಭವನ್ನು ಇದೇ ಶುಕ್ರವಾರದಂದು ನಡೆಯಲಿದೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ದಲಿತ ಸಂಘಟನೆಯ ಮುಖಂಡರಾದ ಮಲ್ಲೇಶ ಚೌಗುಲೆ ಮಾತನಾಡಿ ಬೆಳಗಾವಿ ಇತಿಹಾಸದಲ್ಲಿ ಯುವಕರಿಗೆ, ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರ ದೊಡ್ಡ ಕೊಡುಗೆ ನೀಡಿದೆ. ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರಾದ ಅನಿಲ ಬೆನಕೆ ಅವರ ಸತತ ಪ್ರಯತ್ನದಿಂದ ೧ ಕೋಟಿ ೩೦ ಲಕ್ಷ ರೂಪಾಯಿಗಳ ಅನುದಾನದಲ್ಲಿ ಉದ್ಯಾನವನವು ಅಭಿವೃಧ್ದಿ ಹೊಂದಲಿದ್ದು, ರಾಜ್ಯ ಸರ್ಕಾರಕ್ಕೆ ಮತ್ತು ಶಾಸಕ ಅನಿಲ ಬೆನಕೆ ಅವರಿಗೆ ಸಮಾಜದ ವತಿಯಿಂದ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.

ಡಾ. ಬಾಬಾಸಾಹೇಬ ಅಂಬೇಡ್ಕರ ಉದ್ಯಾನ ಅಭಿವೃಧ್ದಿಗಾಗಿ ಅನುದಾನ ಮಂಜೂರು ಮಾಡಿಸಿದ್ದಕ್ಕಾಗಿ ವಿವಿಧ ಸಂಘಟನೆಗಳಿಂದ ಶಾಸಕ ಅನಿಲ ಬೆನಕೆ ಅವರನ್ನು ಸನ್ಮಾನಿಸಿದರು ಹಾಗೂ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ನಗರ ಸೇವಕ ಸಂದೀಪ ಜಿರಗಿಹಾಳ, ಡಾ. ಬಿ. ಆರ್. ಅಂಬೇಡ್ಕರ ಸಾಂಸ್ಕೃತಿಕ ಭವನ ಸಮೀತಿ ಸದಸ್ಯರಾದ ಹಾಗೂ ದಲಿತ ಮುಖಂಡರಾದ ಮಲ್ಲೇಶ ಚೌಗುಲೆ, ಇನ್ನಿತರ ದಲಿತ ಸಂಘಟನೆಯ ಮುಖಂಡರುಗಳಾದ ಸಿದ್ದಪ್ಪ ಕಾಂಬಳೆ, ಅರ್ಜುನ ದೇಮಟ್ಟಿ, ರಾಮಾ ಚವ್ವಾಣ, ದೀಪಕ ದಬಾಡೆ, ಮಹಾದೇವ ತಳವಾರ, ಸಂತೋಷ ಹಲಗೇಕರ, ಸುಧೀರ ಚೌಗುಲೆ, ವಿನೋದ ಸೊಲ್ಲಾಪೂರೆ, ಜೀವನ ಖುರ್ಡೆ ಹಾಗೂ ಇತರ ದಲಿತ ಮುಖಂಡರುಗಳು, ಮಹಾನಗರ ಪಾಲಿಕೆ ಅಧಿಕಾರಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button