
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೇಂದ್ರ ರೇಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ನೇತೃತ್ವದಲ್ಲಿ ಬಿಜೆಪಿ ಬೆಳಗಾವಿ ಗ್ರಾಮಾಂತರ ಜಿಲ್ಲೆ ಹಾಗೂ ಮಹಾನಗರ ಜಿಲ್ಲೆಗಳಲ್ಲಿ ಕೋವಿಡ್ ೧೯ ಹಾಗೂ ಲಾಕ್ ಡೌನ್ ಹಿನ್ನೆಲೆಯಲ್ಲಿ ಪಕ್ಷದಿಂದ ನಡೆದ ಸೇವಾ ಕಾರ್ಯ ಚಟುವಟಿಕೆಗಳ ಬಗ್ಗೆ ಸಮಾಲೋಚನೆ ನಡೆಯಿತು.

ವಿಭಾಗ ಪ್ರಭಾರಿ ಈರಣ್ಣಾ ಕಡಾಡಿ ವಿಶೇಷವಾಗಿ ರೈತರ ಬೆಳೆಯ ಬೆಂಬಲ ಬೆಲೆ ಕುರಿತು ಮಾತನಾಡಿದರು.

ಮಹಾನಗರ ಅಧ್ಯಕ್ಷ ಶಶಿಕಾಂತ ಪಾಟೀಲ, ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ಚಿಕ್ಕನಗೌಡರ ಪಕ್ಷದ ಸೇವಾ ಕಾರ್ಯಗಳ ಸಮಗ್ರ ವರದಿ ನೀಡಿದರು. ವಿಭಾಗ ಸಂಘಟನಾ ಕಾರ್ಯದರ್ಶಿ ರವಿ ಹೀರೆಮಠ ಮುಂದಿನ ಸೇವಾ ಕಾರ್ಯಗಳ ಬಗ್ಗೆ ಸೂಚಿಸಿದರು.
ಮಹೇಶ ಮೋಹಿತೆ, ಸುಭಾಷ್ ಪಾಟೀಲ, ಮುರುಘೇಂದ್ರ ಪಾಟೀಲ, ಗಿರೀಶ್ ದೊಂಗಡಿ, ದಾದಾಗೌಡ ಬಿರಾದಾರ ಇತರು ಭಾಗವಹಿಸಿದ್ದರು.