Belagavi NewsBelgaum NewsKannada NewsKarnataka News

*ನಾಳೆ ಬೆಳಗಾವಿಯಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಣಿ ಚೆನ್ನಮ್ಮ ವೃತ್ತದಲ್ಲಿ 450 ಎಂಎಂ ಪೈಪ್ ವಾಲ್ವನಲ್ಲಿ ಸೋರಿಕೆ ಇರುವುದರಿಂದ ತುರ್ತು ನಿರ್ವಹಣಾ ಕಾರ್ಯ ಕೈಗೊಂಡಿರುವ ಹಿನ್ನಲೆಯಲ್ಲಿ ಬೆಳಗಾವಿ ನಗರದ ಉತ್ತರ ಭಾಗದ ಕೆಲವು ಭಾಗಗಳಲ್ಲಿ ನಾಳೆ ನೀರು ಸರಬರಾಜು ಮಾಡುವಲ್ಲಿ ವ್ಯತ್ಯಯ ಉಂಟಾಗಲಿದೆ.

ನೀರು ವ್ಯತ್ಯಯವಾಗುವ ಪ್ರದೇಶಗಳು  :

ಭಾಗವಾನ ಗಲ್ಲಿ, ಖಡೇ ಬಜಾರ್, ದರ್ಬಾರ ಗಲ್ಲಿ, ಭೋವಿ ಗಲ್ಲಿ, ಪೊಂಗಲ್ ಗಲ್ಲಿ, ಮೋಮಿನ್ ಗಲ್ಲಿ, ಬುರುಡ ಗಲ್ಲಿ, ಗಣಪತಿ ಗಲ್ಲಿ, ರವಿವಾರ ಪೇಠ, ಕಲೈಗಾರ ಗಲ್ಲಿ, ಕಾಮತ್ ಗಲ್ಲಿ, ಕಸಾಯಿ ಗಲ್ಲಿ, ಅನಂತಶಯನ ಗಲ್ಲಿ, ಕುಲಕರ್ಣಿ ಗಲ್ಲಿ, ಕೊನವಾಳ ಗಲ್ಲಿ, ಶೇರೆ ಗಲ್ಲಿ, ಮಠ ಗಲ್ಲಿ, ಮುಜಾವರ ಗಲ್ಲಿ, ಭಾಂದುರ ಗಲ್ಲಿ, ತಾನಾಜಿ ಗಲ್ಲಿ, ತಹಶಿಲ್ದಾರ ಗಲ್ಲಿ, ಪುಲ್ಟಾಗ ಗಲ್ಲಿ, ಮಹಾದ್ವಾರ ರಸ್ತೆಯ 01 ರಿಂದ 05ನೇ ಕ್ರಸ್ ವರೆಗೆ, ಸಂಬಾಜಿ ಗಲ್ಲಿ, ಅಟಾಳೆ ಚಾಳ, ಎಸ್.ಪಿ.ಎಂ ರಸ್ತೆಯ 02ನೇ ಕ್ರಾಸ್, ಗುಡಶೆಡ್ ರಸ್ತೆಯ 04ನೇ ಕ್ರಾಸ್, ವೀರಭದ್ರ ನಗರದ 01 ರಿಂದ 07ನೇ ಕ್ರಾಸ್, ಪಾರುಕಿಯಾ ಕಾಲೋನಿ, ಅಹ್ಮದ್ ನಗರ ಮತ್ತು ಪೋಲಿಸ್ ಹೆಡ್ ಕ್ವಾರ್ಟಸ್ ಪ್ರದೇಶದಲ್ಲಿ ನೀರು ಪೂರೈಕೆಯಲ್ಲಿ ವ್ಯತವಾಗಲಿದೆ.

ಆದ ಕಾರಣ ಸಾರ್ವಜನಿಕರು ಮೇ।। ಎಲ್ & ಟಿ ಯೊಂದಿಗೆ ಸಹಕರಿಸಲು ಕಾರ್ಯಪಾಲಕ ಅಭಿಯಂತರರು, ಯೋ.ಅ.ಘ, ಕುಸ್ಸೆಂಪ್-ಕೆ.ಯು.ಐ.ಡಿ. ಎಫ್.ಸಿ,ಬೆಳಗಾವಿ ಇವರು ಪ್ರಕಟಣೆಯಲ್ಲಿ ಕೋರಿರುತ್ತಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button