ಹಿಂದು ಧರ್ಮಕ್ಕೆ ಮತಾಂತರ : ರಾಮಸಿಂಹನ್ ಆದ ನಿರ್ದೇಶಕ ಅಲಿ ಅಕ್ಬರ್

ಪ್ರಗತಿವಾಹಿನಿ ಸುದ್ದಿ, ತಿರುವನಂತಪುರ – ಮಲಯಾಳಂ ಚಿತ್ರ ನಿರ್ದೇಶಕ ಅಲಿ ಅಕ್ಬರ್ ಹಿಂದು ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಅವರೀಗೆ ಈಗ ರಾಮಸಿಂಹನ್ ಎಂದು ಮರುನಾಮಕರಣವಾಗಿದೆ.

ಅಲಿ ಅಕ್ಬರ್ ಇತ್ತೀಚೆಗೆ ತಾನು ಹಿಂದೂ ಧರ್ಮಕ್ಕೆ ಸೇರುವುದಾಗಿ ಸೋಷಿಯಲ್ ಮೀಡಿಯಾಗಳಲ್ಲಿ ಹೇಳಿಕೆ ನೀಡಿದ್ದರು. ಇದೀಗ ಅವರು ಹಿಂದೂ ಧರ್ಮಕ್ಕೆ ಮತಾತಂರಗೊಳ್ಳುವ ಪ್ರಕ್ರಿಯೆ ಮುಗಿದಿದೆ ಎಂದು ಹಿಂದೂ ಸೇವಾ ಕೇಂದ್ರದ ನಾಯಕ ಪ್ರತೀಕ್ ವಿಶ್ವನಾಥ್ ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಅಲಿ ಅಕ್ಬರ್ ಅವರು ಹೋಮಕುಂಡದ ಮುಂದೆ ಜನಿವಾರ ಧರಿಸುತ್ತಿರುವ ಫೋಟೊ ಕೂಡ ಹಾಕಲಾಗಿದೆ. ಜತೆಗೆ ಅಲಿ ಅಕ್ಬರ್ ಅವರ ಪತ್ನಿ ಲೂಸಿ ಕೂಡ ಹಿಂದೂ ಧರ್ಮ ಸೇರಿದ್ದಾರೆ.

ಮತಾಂತರ ಯಾಕೆ ?

ಇತ್ತೀಚೆಗೆ ಭಾರತೀಯ ಸೇನಾ ಮುಖ್ಯಸ್ಥರಾಗಿದ್ದ ಜನರಲ್ ಬಿಪಿನ್ ರಾವತ್ ಅವರು ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿದ್ದರು. ಈ ದುರ್ಘಟನೆಯ ಕುರಿತು ಕೆಲ ಸಮುದಾಯದವರು ಸಂಭ್ರಮಾಚರಣೆಯ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು ಎಂದು ಅಲಿ ಅಕ್ಬರ್ ಆರೋಪಿಸಿದ್ದರು.

ದೇಶದ ಸೇನಾ ಮುಖ್ಯಸ್ಥನ ಮರಣವನ್ನು ಸಂಭ್ರಮಿಸುವ ಮನೋಸ್ಥಿತಿ ತನಗೆ ಬೇಡ ಎಂದು ಅಲಿ ಅಕ್ಬರ್ ಹಿಂದೂ ಧರ್ಮಕ್ಕೆ ಸೇರುವ ಒಲವು ತೋರಿದ್ದರು. ಅದೀಗ ನೆರವೇರಿದೆ ಎಂದು ಕೇರಳ ಕೌಮುದಿ ಸೇರಿದಂತೆ ಪ್ರಮುಖ ಮಲಯಾಳಂ ಮತ್ತು ಆಂಗ್ಲ ಮಾಧ್ಯಮಗಳಲ್ಲಿ ವರದಿಯಾಗಿದೆ.

Home add -Advt

 

ಖ್ಯಾತ ನಿರ್ದೇಶಕ ಹಿಂದೂ ಧರ್ಮಕ್ಕೆ ಮತಾಂತರ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button