*ಸಹಕಾರ ಸಂಘಗಳು ರೈತರ ಜೀವನಾಡಿ: ಸಂಸದೆ ಪ್ರಿಯಂಕಾ ಜಾರಕಿಹೊಳಿ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿಯಾಗಿದ್ದು, ಇವುಗಳ ಪ್ರಗತಿಗೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ಹೇಳಿದರು.
ಯಮಕನಮರಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಉಗ್ರಾಣ ಮತ್ತು ರೈತ ಸೇವಾ ಕೇಂದ್ರದ ಕಟ್ಟಡಗಳನ್ನು ಗಣ್ಯರೊಂದಿಗೆ ಉದ್ಘಾಟಿಸಿ, ಸನ್ಮನ ಸ್ವೀಕರಿಸಿ ಮಾತನಾಡಿದ ಅವರು, ಸಂಘದ ಸರ್ವ ಸದಸ್ಯರ, ರೈತರ ಪ್ರಯತ್ನದಿಂದ ಯಮಕನಮರಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಇಂದು ಪ್ರಗತಿ ಕಂಡಿದೆ. ಕಾರಣ ಮುಂದಿನ ದಿನಗಳಲ್ಲಿ ಈ ಸಂಘ ಇನ್ನಷ್ಟು ಉತ್ತುಂಗಕ್ಕೆ ಎರುತ್ತದೆ ಎಂದು ಹರಿಸಿದರು.
ಗ್ರಾಮೀಣ ಪ್ರದೇಶದ ಜನತೆ ಕೃಷಿ ಪತ್ತಿನ ಸಹಕಾರ ಸಂಘಗಳು ತುಂಬ ಅನುಕೂಲವಾಗಿವೆ. ಇವುಗಳನ್ನು ಸಾಲ ಪಡೆದುಕೊಂಡು ಕೃಷಿ ಚಟುವಟಿಕೆಗೆ ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬಹದು ಎಂದು ಹೇಳಿದರು.
ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳು ಇದ್ದರೂ ಸಹ ರೈತರು ಇದನ್ನೇ ಅವಲಂಭಿಸಿದ್ದಾರೆ. ಸರಕಾರ ಕೂಡ ಅವರಿಗೆ ಶೂನ್ಯ ಬಡ್ಡಿ ದರಲ್ಲಿ ಸಾಲ ದೊರೆಯುತ್ತದೆ. ಇದನ್ನು ಸಂಪೂರ್ಣವಾಗಿ ಸದ್ಭಳಕೆ ಮಾಡಿಕೊಳ್ಳಬೇಕು. ಸಂಘದಿಂದ ಸಾಲ ಪಡೆದುಕೊಂಡು ಹೈನುಗಾರಿಕೆ ಹಾಗೂ ನೀರಾವರಿ ಸೇರಿದಂತೆ ಇನ್ನಿತರ ಚಟುವಟಿಕೆಗೆ ಹಣ ಬಳಸಿಕೊಳ್ಳಬೇಕು. ಸಂಘದ ವತಿಯಿಂದ ರೈತರಿಗೆ ಸಾಕಷ್ಟು ಸೌಲಭ್ಯ ನೀಡಲಾಗುತ್ತದೆ. ಅವುಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡರೆ ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಮಾಜಿ ಸಂಸದ, ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ಮಾತನಾಡಿ, ಚಿಕ್ಕೋಡಿ ಲೋಕಸಭೆ ಕ್ಷೇತ್ರದ ನೂತನ ಸಂಸದರಾಗಿ ಆಯ್ಕೆಯಾದ ಪ್ರಿಯಂಕಾ ಜಾರಕಿಹೊಳಿ ಅವರು ಸಮಯ ಸಿಕ್ಕಾಗ ಲೋಕಸಭೆಯಲ್ಲಿ ರೈತರ ಪ್ರಗತಿಗಾಗಿ ಧ್ವನಿ ಎತ್ತಬೇಕೆಂದು ಸಲಹೆ ನೀಡಿದರು.
ಸುಕ್ಷೇತ್ರ ಹುಣಸಿಕೊಳ್ಳಮಠದ ಶ್ರೀ ಸಿದ್ಧಬಸವ ದೇವರು, ಕಾರಿಮಠದ ಶ್ರೀ ಗುರುಸಿದ್ಧ ಮಹಾಸ್ವಾಮಿಗಳು, ಹತ್ತರಗಿಯ ಹರಿಮಂದಿರದ ಶ್ರೀ ನರಸಿಂಹ ಏಕನಾಥ ಗೋಸಾವಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದರು.
ಇದೇ ವೇಳೆ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ನೂತನ ಸಂಸದರಾಗಿ ಆಯ್ಕೆಯಾದ ಪ್ರಿಯಂಕಾ ಜಾರಕಿಹೊಳಿ ಅವರನ್ನು ಯಮಕನಮರಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಹುಕ್ಕೇರಿ ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಎಸ್. ಎ. ಪಾಟೀಲ್, ಯಮಕನಮರಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಹಾಸ ಜೋಶಿ, ಉಪಾಧ್ಯಕ್ಷ ಶ್ರೀಕಾಂತ ಅವಲಕ್ಕಿ, ನಿದೇರ್ಶಕರಾದ ಸಚೀನ್ ಜೋಶಿ, ಶಿವಪ್ಪಾ ಮಾದಗರ, ರಾಣಪ್ಪಾ ತಬರಿ, ಮಲ್ಲಪ್ಪಾ ಬಿಸಿರೊಟ್ಟಿ, ಬಾಬು ಮಲಕಾರ, ಭೂಪಾಲ ಮಗದುಮ್ಮ, ಮಹಾದೇವಿ ದತ್ತಾ ಶಿಂಧೆ, ಸುರೇಕಾ ಧುಪದಾಳ, ಬಿಡಿಸಿಸಿ ಪ್ರತಿನಿಧಿ ರಾಜು ಮುನ್ನೊಳ್ಳಿ, ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಸತೀಶ್ ಅಲೂರಿ, ಮುಖಂಡರಾದ ರವೀಂದ್ರ ಜಿಂಡ್ರಾಳೆ, ಕಿರಣಸಿಂಗ್ ರಜಪೂತ ಸೇರಿದಂತೆ ರೈತರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ