Kannada NewsKarnataka NewsPolitics

*ನಾನು ಸತ್ಯವನ್ನೇ ಹೇಳಿದ್ದೇನೆ; ಅದು ನನ್ನದೇ ಆಡಿಯೋ ಎಂದ ಶಾಸಕ ಬಿ.ಆರ್.ಪಾಟೀಲ್*

ಪ್ರಗತಿವಾಹಿನಿ ಸುದ್ದಿ: ವಸತಿ ಇಲಾಖೆಯಲ್ಲಿ ಹಣ ಪಡೆದು ಮನೆ ಕೊಡಲಾಗುತ್ತಿದೆ ಎಂದು ತಮ್ಮದೇ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಇದೀಗ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ವಸತಿ ಇಲಾಖೆ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಆಪ್ತ ಕಾರ್ಯದರ್ಶಿ ಜೊತೆ ತಾವು ಮಾತನಾಡಿದ್ದಾಗಿ ವೈರಲ್ ಆಗಿರುವ ಆಡಿಯೋ ವಿಚಾರವಾಗಿ ಪ್ರತಿಕ್ರಿಯಿಸಿರುವ ಶಾಸಕ ಬಿ.ಆರ್.ಪಾಟೀಲ್, ಅದು ನನ್ನದೇ ಆಡಿಯೋ. ಆಡಿಯೋದಲ್ಲಿ ಮಾತನಾಡಿದ್ದು ನಾನೇ. ನಾನು ಸತ್ಯವನ್ನೇ ಹೇಳಿದ್ದೇನೆ. ನನ್ನ ಕ್ಷೇತ್ರಕ್ಕೆ ಮನೆ ಕೊಡಿ ಎಂದು ನಾನು ನಾಲ್ಕು ಬಾರಿ ಪತ್ರ ಬರೆದರೂ ನನಗೆ ಮನೆ ಸಿಕ್ಕಿಲ್ಲ. ಪಂಚಾಯಿತಿ ಅಧ್ಯಕ್ಷರು ಮನೆ ತಂದಿದ್ದಾರೆ. ಹಣ ಕೊಟ್ಟವರಿಗೆ ಮನೆ ಕೊಡಲಾಗುತ್ತಿದೆ ಎಂದು ಹೇಳಿದರು.

5-6 ಪಂಚಾಯಿತಿಗಳಲ್ಲಿ ಹಣ ಕೊಟ್ಟು ಮನೆ ಪಡೆಯಲಾಗಿದೆ. ನಾನು ನಾಲ್ಕು ಬಾರಿ ಪತ್ರ ಬರೆದು ಮನವಿ ಮಾಡಿದರೂ ನನ್ನ ಕ್ಷೇತ್ರಕ್ಕೆ ಕೊಟ್ಟಿಲ್ಲ. ಹಣ ಕೊಟ್ಟವರಿಗೆ ಮನೆ ನೀಡುವ ಕೆಲಸವಾಗಿದೆ. ನನ್ನ ಶಿಫಾರಸು ಪತ್ರಗಳನ್ನು ಅಧಿಕಾರಿಗಳು ಪರ್ಗಣನೆಗೆ ತೆಗೆದುಕೊಂಡಿಲ್ಲ. ನನ್ನ ಕ್ಷೇತ್ರಕ್ಕೆ ಮಾತ್ರವಲ್ಲ, ಎಲ್ಲಾ ಕ್ಷೆತ್ರಕ್ಕೂ ಹಣ ಪಡೆಯುತ್ತಿದ್ದಾರೆ. ಈ ಬಗ್ಗೆ ಬೇಕಾದರೆ ತನಿಖೆಯಾಗಲಿ ಎಂದು ಹೇಳಿದ್ದಾರೆ.

ನಾನೇನೂ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟುಯಾಗಲು ಹೋಗಲ್ಲ, ಅವರು ಕರೆದರೆ ಮಾತ್ರ ಭೇಟಿಯಾಗುತ್ತೇನೆ ಎಂದು ಹೇಳಿದರು.


Related Articles

Back to top button