Latest

ದಾಖಲೆ ಮೇಲೆ ದಾಖಲೆ ಬರೆಯುತ್ತಿರುವ ಕೊರೋನಾ, ಇಂದು 1502 ಪ್ರಕರಣ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಕೊರೋನಾ ಮಹಾಮಾರಿ ದಾಖಲೆಯ ಮೇಲೆ ದಾಖಲೆ ಬರೆಯುತ್ತಿದೆ. ಇಂದು 1502 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರಿಂದಾಗಿ ರಾಜ್ಯದಲ್ಿ ಒಟ್ಟೂ ಸೋಂಕಿತರ ಸಂಖ್ಯೆ 18016. 19 ಜನರು ಸಾವಿಗೀಡಾಗಿದ್ದಾರೆ.

ಬೆಂಗಳೂರಿನಲ್ಲಿ ಇಂದು 889 ಜನರಿಗೆ ಕೊರೋನಾ ಪತ್ತೆಯಾಗಿದೆ. ದಕ್ಷಿಣ ಕನ್ನಡ 90, ಮೈಸೂರು 68, ಬಳ್ಳಾರಿ 65, ಧಾರವಾಡ 45 ಜನರಿಗೆ ಸೋಂಕು ದೃಢಪಟ್ಟಿದೆ. ವಿಜಯಪುರ ಮತ್ತು ರಾಮನಗರ ತಲಾ 39, ಕಲಬುರಗಿ 38, ಬೀದರ್ 32 ಜನರಿಗೆ ಕೊರೋನಾ ಪತ್ತೆಯಾಗಿದೆ.

Home add -Advt

ತುಮಕೂರು 26, ಶಿವಮೊಗ್ಗ 23, ಮಂಡ್ಯ 19, ಉತ್ತರಕನ್ನಡ 17, ಹಾಸನ 15, ಉಡುಪಿ 14, ಕೋಲಾರ 12, ರಾಯಚೂರು 11, ಬಾಗಲಕೋಟೆ 10, ದಾವಣಗೆರೆ  8, ಯಾದಗಿರಿ ಮತ್ತು ಬೆಳಗಾವಿ ತಲಾ 7, ಕೊಡಗು 6, ಬೆಂಗಳೂರು ಗ್ರಾಮಾಂತರ 5, ಹಾವೇರಿ, ಕೊಪ್ಪಳ 4, ಚಿತ್ರದುರ್ಗ 3, ಗದಗ 2, ಚಿಕ್ಕಬಳ್ಳಾಪುರ ಚಿಕ್ಕಮಗಳೂರು ತಲಾ 1 ಪ್ರಕರಣ ಪತ್ತೆಯಾಗಿದೆ.

ಬೆಳಗಾವಿಯಲ್ಲಿ 45 ವರ್ಷದ ವ್ಯಕ್ತಿಯೋರ್ವರು ಸಾವಿಗೀಡಾಗಿದ್ದಾರೆ. ಇನ್ನೋರ್ವ 8 ವರ್ಷದ ಬಾಲಕಿಯ ಮತ್ತು 46 ವರ್ಷದ ವ್ಯಕ್ತಿಯ ಸೋಂಕಿನ ಸಪರ್ಕ ಪತ್ತೆಯಾಗಿಲ್ಲ. ಉತ್ತರ ಕನ್ನಡ ಜಿಲ್ಲೆಯಲ್ಲಿ 68 ವರ್ಷದ ಮಹಿಳೆ ಸಾವಿಗೀಡಾಗಿದ್ದಾಳೆ.

 

 

 

Related Articles

Back to top button