Kannada NewsLatestNational

*3ನೇ ಮಹಡಿಯಿಂದ ಪತ್ನಿಯನ್ನು ತಳ್ಳಿ ಕೊಲೆಗೈದ ಪತಿ*

ಪ್ರಗತಿವಾಹಿನಿ ಸುದ್ದಿ: ಪತಿ-ಪತ್ನಿಯ ನಡುವಿನ ಜಗಳ ತಾರಕಕ್ಕೇರಿ ಕೋಪದ ಬರದಲ್ಲಿ ಪತಿ ಮಹಾಶಯ ಪತ್ನಿಯನ್ನು ಮೂರನೇ ಮಹಡಿಯಿಂದ ತಳ್ಳಿ ಹತ್ಯೆಗೈದಿರುವ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್ ನಲ್ಲಿ ನಡೆದಿದೆ.

ಘಾಜಿಯಾಬಾದ್ ನ ಗೋವಿಂದ ಪುರಂನಲ್ಲಿ ಈ ಘಟನೆ ನಡೆದಿದೆ. ಗುತ್ತಿಗೆದರ ವಿಕಾಸ್ ಕುಮಾರ್ ಎಂಬಾತ ಕುಡಿದ ಮತ್ತಿನಲ್ಲಿ ಮನೆಗೆ ಬಂದು ಪತ್ನಿ ಜೊತೆ ಜಗಳ ಶುರುಮಾಡಿದ್ದಾನೆ. ಇಬ್ಬರ ನಡುವೆ ಗಲಾಟೆ ವಿಕೋಪಕ್ಕೆ ತಿರುಗಿದೆ. ಜಗಳದ ವೇಳೆ ಗಂಡ-ಹೆಂಡತಿ ಕೈಕೈ ಮಿಲಾಯಿಸಿದ್ದು, ಪತಿಯನ್ನು ಮೂರನೇ ಮಹಡಿಯಿಂದ ನೂಕಿದ್ದಾನೆ.

Home add -Advt

ಕೆಳಗೆ ಬಿದ್ದ ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ತಕ್ಷಣ ಆಕೆಯನ್ನು ವಿಕಾಸ್ ಕುಮಾರ್ ನೇ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಆದರೆ ಪತ್ನಿ ಕೊನೆಯುಸಿರೆಳೆದಿದ್ದಾಗಿ ವೈದ್ಯರು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಪೊಲೀಸರು ವಿಕಾಸ್ ಕುಮಾರ್ ನನ್ನು ಬಂಧಿಸಿದ್ದಾರೆ.


Related Articles

Back to top button